ಲಗ್ಷುರಿ ಕಾರ್ ಕಲೆಕ್ಷನ್‌ಗೂ ಬಾಲಿವುಡ್ ತಾರೆಯರಿಗೂ ಎಲ್ಲಿಲ್ಲದ ನಂಟು ಅಂದ್ರೆ ತಪ್ಪಾಗುವುದಿಲ್ಲ. ಮಾರುಕಟ್ಟೆಯಲ್ಲಿ ಲಗ್ಗೆಯಿಡುವ ಪ್ರತಿಯೊಂದು ದುಬಾರಿ ಕಾರುಗಳು ಸಹ ಬಾಲಿವುಡ್‌ನ ಬಹುತೇಕ ತಾರೆಗಳ ಕಾರ್ ಕಲೆಕ್ಷನ್‌ನಲ್ಲಿ ಸ್ಥಾನ ಪಡೆದಿದ್ದು, ಇದೀಗ ನಟ ಸಿದ್ದಾರ್ಥ್ ಮಲ್ಹೋತ್ರಾ ಸಹ ತಮ್ಮ ಕನಸಿನ ರೇಂಜ್ ರೋವರ್ ವೊಗ್ ಖರೀದಿಸಿದ್ದಾರೆ.

ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ತನ್ನದೆ ಜನಪ್ರಿಯತೆ ಹೊಂದಿರುತ್ತಿರುವ ನಟ ಸಿದ್ದಾರ್ಥ ಮಲ್ಹೋತ್ರಾ ತಮ್ಮ ನಟನೆಯ ಮೂಲಕ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದು, ಕೊನೆಗೂ ತಮ್ಮ ನೆಚ್ಚಿನ ಕಾರು ಮಾದರಿಯಾದ ರೇಂಜ್ ರೋವರ್ ವೊಗ್ ಖರೀದಿಸಿ ಬಾಲಿವುಡ್ ಮಂದಿಗೆ ಬಿಗ್ ಸರ್ಪೈರ್ಸ್ ನೀಡಿದ್ದಾರೆ.

ನಟ ಸಿದ್ದಾರ್ಥ್ ರೇಂಜ್ ರೋವರ್‌ನಲ್ಲಿಯೇ ವೊಗ್ ಎನ್ನುವ ಟಾಪ್ ಎಂಡ್ ವೆರಿಯೆಂಟ್ ಖರೀದಿಸಿದ್ದು, ಬಳಿಕ ತಮ್ಮ ಆಪ್ತ ಗೆಳೆಯ ಹಾಗೂ ನಿರ್ದೇಶಕರೂ ಆಗಿರುವ ಕರಣ್ ಜೋಹರ್ ಜೊತೆ ಲಾಂಗ್ ಡ್ರೈವ್‌ನೊಂದಿಗೆ ಕಾರು ಖರೀದಿಯ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಕಪ್ಪು ಬಣ್ಣದ ಆಯ್ಕೆ ಹೊಂದಿರುವ ಸಿದ್ದಾರ್ಥ್ ಮಲ್ಹೋತ್ರಾ ಹೊಸ ವೊಗ್ ಕಾರು, ಬೆಲೆಯಲ್ಲೂ ಕೂಡಾ ಇತರೆ ಕಾರುಗಳಿಂತಲೂ ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಆರಂಭಿಕ ಬೆಲೆಯೇ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.08 ಕೋಟಿಗೆ ಮಾರಾಟವಾಗುತ್ತಿದೆ.

ಇದರಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ 4.4-ಲೀಟರ್ ವೊಗ್ ಎಸ್ಇ ಡಿಸೇಲ್ ಆಟೋಮ್ಯಾಟಿಕ್ ವರ್ಷನ್ ಖರೀದಿ ಮಾಡಿದ್ದು, ಇದರ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.2.34 ಕೋಟಿ ಪಡೆದುಕೊಂಡಿದೆ ಎನ್ನಲಾಗಿದೆ.

Summary
ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ Siddharth ಮಲ್ಹೋತ್ರಾ..!
Article Name
ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ Siddharth ಮಲ್ಹೋತ್ರಾ..!

LEAVE A REPLY

Please enter your comment!
Please enter your name here