ದೇವಾಲಯದ ಗರುಡಗಂಬದ ಮೇಲೆ ಕೋತಿಯೊಂದು ಕೂತು ಜಗದ ಪರಿವೆಯೇ ಇಲ್ಲದೆ ಗಂಟೆ ಭಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಕ್ಷಾತ್ ಹನುಮಂತನ ಅವತಾರವೇನೋ ಎಂಬಂತೆ ಗರುಡಗಂಬವನ್ನೇರಿ ಕುಳಿತ ವಾನರ ವಿರಾಮವನ್ನೇ ನೀಡದೆ ನಿರಂತರವಾಗಿ ಗಂಟೆ ಬಾರಿಸುತ್ತಲೇ ಇರುವ ಈ ವಿಡಿಯೋವಂತೂ ಹನುಮ ಭಕ್ತರ ಕಣ್ಣು ತಂಪಾಗಿಸಿದೆ.

ಆದರೆ ಈ ವಿಡಿಯೋ ಎಲ್ಲಿ ತೆಗೆದಿದ್ದು, ಯಾವ ದೇವಾಲಯ ಎಂಬಿತ್ಯಾದಿ ಮಾಹಿತಿಗಳು ಲಭ್ಯವಾಗಿಲ್ಲ.

ಕೊಪ್ಪಳ ನಗರದಲ್ಲಿ ಊರಹಂದಿಯೊಂದು ದೇವಾಲಯ ಮತ್ತು ಮಸೀದಿಗೆ ನಿಯಮಿತವಾಗಿ ಪ್ರದಕ್ಷಿಣೆ ಹಾಕುತ್ತಿದ್ದ ವಿಚಿತ್ರ ವಿಡಿಯೋವೊಂದು ಕಳೆದ ವರ್ಷ ವೈರಲ್ ಆಗಿತ್ತು. ಮಸೀದಿ-ಮಂದಿರ ಎರಡಕ್ಕೂ ಪ್ರದಕ್ಷಿಣೆ ಹಾಕುವ ಮೂಲಕ ಹದಿ ಸರ್ವ ಧರ್ಮ ಸಮನ್ವಯದ ಪಾಠ ಹೇಳುತ್ತಿದೆ ಎಂದು ವಿಡಿಯೋ ನೋಡಿದ ಜನ ಕಮೆಂಟ್ ಮಾಡುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಕೋತಿಯ ಕೈಯಲ್ಲಿ ಸ್ಟೇರಿಂಗ್ ಕೊಟ್ಟು ಬಸ್ಸು ಓಡಿಸುವಂತೆ ಹೇಳಿದ ವಿಡಿಯೋ ವೈರಲ್ ಆಗಿ, ನಂತರ ದಾವಣಗೆರೆಯ ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ವೊಬ್ಬ ತನ್ನ ಕೆಲಸ ಕಳೆದುಕೊಂದ ಘಟನೆಯನ್ನೂ ಇಲ್ಲಿ ಸ್ಮರಿಸಬಹುದು.

Summary
ದೇವಾಲಯದ ಗಂಟೆ ಬಾರಿಸುತ್ತಿರುವ ಕೋತಿ!
Article Name
ದೇವಾಲಯದ ಗಂಟೆ ಬಾರಿಸುತ್ತಿರುವ ಕೋತಿ!
Description
ಕೊಪ್ಪಳ ನಗರದಲ್ಲಿ ಊರಹಂದಿಯೊಂದು ದೇವಾಲಯ ಮತ್ತು ಮಸೀದಿಗೆ ನಿಯಮಿತವಾಗಿ ಪ್ರದಕ್ಷಿಣೆ ಹಾಕುತ್ತಿದ್ದ ವಿಚಿತ್ರ ವಿಡಿಯೋವೊಂದು ಕಳೆದ ವರ್ಷ ವೈರಲ್ ಆಗಿತ್ತು. ಮಸೀದಿ-ಮಂದಿರ ಎರಡಕ್ಕೂ ಪ್ರದಕ್ಷಿಣೆ ಹಾಕುವ ಮೂಲಕ ಹದಿ ಸರ್ವ ಧರ್ಮ ಸಮನ್ವಯದ ಪಾಠ ಹೇಳುತ್ತಿದೆ ಎಂದು ವಿಡಿಯೋ ನೋಡಿದ ಜನ ಕಮೆಂಟ್ ಮಾಡುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here