ಬಾಗಲಕೋಟೆ

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಹಾಕಿಸಲಾಗಿದೆ.
ಅದಾಗಿ 6 ತಿಂಗಳಾದರೂ ವಿದ್ಯುತ್​ ಸಂಪರ್ಕಕ್ಕೆ ಅಧಿಕಾರಿಗಳು ಟಿಸಿ ಅಳವಡಿಸಿಲ್ಲ.
ಈ ಬಗ್ಗೆ ಸಿದ್ದರಾಮಯ್ಯನವರಿಗೆ ರೈತ ಟೋಪಣ್ಣ ಟ್ವೀಟ್​ ಮಾಡಿದ್ದಾರೆ.

ಸಾಕಷ್ಟು ಬಾರಿ ಮನವಿಪತ್ರ ಸಲ್ಲಿಸಿದರೂ ಯಾವುದೇ ಉಪಯೋಗವಾಗದ ಹಿನ್ನೆಲೆಯಲ್ಲಿ, ಖುದ್ದು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಲು ಶಾಸಕರು ಸಿಗದ ಕಾರಣ ಬಾಗಲಕೋಟೆಯ ರೈತನೋರ್ವ ಟ್ವಿಟ್ಟರ್​ನಲ್ಲಿ ತಮ್ಮ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟ್ವೀಟ್​ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ಬಾಗಲಕೋಟೆಗೆ ಅವರು ಆಗಾಗ ಹೋಗಿಬರುತ್ತಾರೆ. ಆದರೆ, ಅವರನ್ನು ಭೇಟಿಯಾಗಲು ಸ್ಥಳೀಯ ರೈತರು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ತಮ್ಮ ಸಮಸ್ಯೆಯನ್ನು ಟ್ವೀಟ್​ ಮಾಡುವ ಮೂಲಕ ಬಾಗಲಕೋಟೆಯ ರೈತ ಟೋಪಣ್ಣ ಹಳ್ಳಿ ಎಂಬುವವರು ವಿಭಿನ್ನವಾಗಿ ಮನವಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯನವರ ಜೊತೆಗೆ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, ಬಾಗಲಕೋಟೆ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಸಿಇಒಗೂ ರೈತ ಟೋಪಣ್ಣ ತಮ್ಮ ಟ್ವೀಟ್​ ಅನ್ನು ಟ್ಯಾಗ್​ ಮಾಡಿದ್ದಾರೆ. ಕೊಳವೆ ಬಾವಿಗೆ ವಿದ್ಯುತ್​ ಸಂಪರ್ಕಕ್ಕೆ ಟಿಸಿ ಅಳವಡಿಸುವಂತೆ ಮನವಿ ಮಾಡಿರುವ ಟೋಪಣ್ಣ, ‘ನಮ್ಮ ಬೋರವೆಲ್ ಗೆ ಕರೆಂಟ್ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ. ರೈತನ ನೋವು ನಿಮಗೆ ಕಾಣಿಸುತ್ತಿಲ್ಲವೇ??’ ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here