ನರಗುಂದ : ಕಳೆದ ಅಕ್ಟೋಬರ್‌ನಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಅಹವಾಲು ಸ್ವೀಕರಿಸಿ 1500ಗೌರವ ಧನ ಈವರೆಗೆ ನೀಡಿಲ್ಲ, ಈಗ ಬಜೆಟ್‌ನಲ್ಲಿ ಶೇ.50ರಷ್ಟು ಗೌರವ ಧನ ಏರಿಸಿದ್ದಾಗಿ ಹೇಳಿದ್ದರೂ ಕೇವಲ 1500 ರೂ. ಏರಿಸಿದ್ದು ತಾವು ಮಧ್ಯಸ್ಥಿಕೆವಹಿಸಿ ಗೌರವಧನವನ್ನು ಐದು ಸಾವಿರಕ್ಕೆ ಹೆಚ್ಚಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ತಹಸೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಇಲ್ಲಿನ ಮಿನಿ ವಿಧಾನ ಸೌಧ ಎದುರು ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆಯನ್ನು ಹುಸಿಗೊಳಿಸಿದ್ದಾರೆ, ಅಕ್ಟೋಬರ್‌ನಲ್ಲಿ ವಿಡಿಯೋ ಕಾನ್ಪರೆನ್ಸ್‌ ಮೂಲಕ ಮಾತನಾಡಿ 1500 ಗೌರವ ಧನ ಹೆಚ್ಚಿಸಿದ್ದಾಗಿ ಘೋಷಿಸಿದ್ದರು. ಆದರೆ ಈವರೆಗೆ ಬಂದಿಲ್ಲ. ಆಗ ನೀಡಿದ್ದ ಭರವಸೆಯನ್ನು ಈಗ ಬಜೆಟ್‌ನಲ್ಲಿ ಮುಂದುವರೆಸಿದ್ದಾರೆ ಎಂದು ದೂರಿದರು.

ಕೇಂದ್ರ ಸರಕಾರ ಅಧಿಕಾರ ಮಂಡಿಸಿರುವ ನಾಲ್ಕು ಬಜೆಟ್‌ನಲ್ಲಿ ಗೌರವಧನ ಹೆಚ್ಚಿಸದೆ ಇರುವುದು ನೋವಿನ ಸಂಗತಿ. ಕೇಂದ್ರ ಸರಕಾರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರೊಂದಿಗೆ ನಡೆದುಕೊಂಡ ರೀತಿ ಸರಿಯಿಲ್ಲ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನೇಕ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದೇವೆ. ಕಾರಣ ತಾವು ಮಧ್ಯ ಪ್ರವೇಶಿಸಿ ಹಣಕಾಸು ಸಚಿವ ಪಿಯುಷ ಗೋಯಲ್‌ ಇವರಿಗೆ ಗೌರವ ಧನವನ್ನು ಐದು ಸಾವಿರಕ್ಕೆ ಹೆಚ್ಚಿಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಶಾರದಾ ಹಿರೇಮನಿ,ಕಾರ್ಯದರ್ಶಿ ಶರದಾ ರೋಣದ, ಉಪಾಧ್ಯಕ್ಷೆ ಸಿ.ಎಂ. ಮುಲ್ಲಾನವರ, ಸುರೇಖಾ ನಾಗರಹಳ್ಳಿ, ಮುತ್ತಕ್ಕ ಹೂಗಾರ, ಕಲ್ಲವ್ವ ಸಿದ್ದಾಪೂರ, ಪಾತಿಮಾ ಸರಾವರಿ, ಪ್ರತಿಭಾ ಕುರಂದರವಾಡ, ಎಸ್‌.ಡಿ.ಹಡಪದ, ಬಿ.ಬಿ.ಗುಡಿಕಾರ, ಎಸ್‌.ಸಿ.ಶೀಲವಂತರ, ಪಿ.ಎ.ಡಾವಣಗೇರಿ, ಆರ್‌.ಆರ್‌.ಭಜಂತ್ರಿ, ಮಲ್ಲವ್ವ ದೊಡಮನಿ, ಪ್ರಮಾ ರಾಂಪೂರ, ಮಲ್ಲಮ್ಮ ಕರಮುಡಿ, ಮಂಜವ್ವ ಪತ್ರಾವಳಿ, ಮಂಜುಳಾ ಕಂಬಳಿ, ಸೈನಾಜ ಗೋರಿಮನಿ, ನೀಲಮ್ಮ ಬಾರಕೇರ, ಎಸ್‌.ಎಚ್‌.ಭಜಂತ್ರಿ, ಎನ್‌.ಎಸ್‌.ಪಾಟೀಲ, ಆರ್‌.ಎಂ.ಖ್ಯಾಡದ, ಎಂ.ಎಂ.ಯಲಿಗಾರ ಇತರರು ಪಾಲ್ಗೊಂಡಿದ್ದರು.

Summary
ನರಗುಂದ : ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ !
Article Name
ನರಗುಂದ : ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ !
Description
ಮಂಜುಳಾ ಕಂಬಳಿ, ಸೈನಾಜ ಗೋರಿಮನಿ, ನೀಲಮ್ಮ ಬಾರಕೇರ, ಎಸ್‌.ಎಚ್‌.ಭಜಂತ್ರಿ, ಎನ್‌.ಎಸ್‌.ಪಾಟೀಲ, ಆರ್‌.ಎಂ.ಖ್ಯಾಡದ, ಎಂ.ಎಂ.ಯಲಿಗಾರ ಇತರರು ಪಾಲ್ಗೊಂಡಿದ್ದರು. 

LEAVE A REPLY

Please enter your comment!
Please enter your name here