ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ಇಂದು ನೂತನ ನಳಂದ ವಿಶ್ವವಿದ್ಯಾನಿಲಯಕ್ಕೆ ಭೂಮಿ ಪೂಜೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮವು ನೆರವೇರಿತು.

ಶಂಕು ಸ್ಥಾಪನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯರವರು ನೆರವೇರಿಸಿದರು ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಡಿ.ಸಿ.ಎಂ. ಪರಮೇಶ್ವರ್ ಅವರು
ಬಿಜೆಪಿಯವರನ್ನು ಕೇಳಿಕೊಂಡು ಆಡಳಿತ ನಡೆಸೋಕೇ ಆಗುತ್ತದೆಯೇ ಎಂದು ಬಿ ಜೆ ಪಿ ಯ ಆರ್.ಅಶೋಕ್ ಅವರಿಗೆ ಟಾಂಗ್ ಕೊಟ್ಟರು.

* ಕಾಂಗ್ರೇಸ್ ಮತ್ತು ಜೆಡಿಎಸ್ ನವರಿಗಿರುವ ಆಡಳಿತ ಅನುಭವ ಬಿಜೆಪಿಯವರಿಗಿಲ್ಲ.
ರಾಜ್ಯ ಮೈತ್ರಿ ಸರ್ಕಾರದ ಅಭಿವೃದ್ದಿ ಬಗ್ಗೆ ಜನತೆಗೆ ಅಧಿವೇಶದ ಮೂಲಕ ತಿಳಿಸುತ್ತೇವೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿದೇಶ ಪ್ರವಾಸದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ,
ರಾಜ್ಯದಲ್ಲಿ ಮೈತ್ರಿ ಸರ್ಕಾರ ಐದು ವರ್ಷ ಪೂರೈಸುತ್ತದೆ ಇದರಲ್ಲಿ ಅನುಮಾನ ಬೇಡ
ಮುಖ್ಯಮಂತ್ರಿ ಬದಲಾವಣೆ ಈಗ ಅಪ್ರಸ್ತುತ .

ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಒಳ ಒಪ್ಪಂದ ನಿಮಗೆ ಗೊತ್ತಿದೆಯಾ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.

ಮಾಜಿ ಡಿಸಿಎಂ. ಆರ್. ಅಶೋಕ್‍ರವರಿಗೆ ಮಾಹಿತಿ ಕೊರತೆ ಇರುವುದರಿಂದ ಸಲ್ಲದ ಆರೋಪ ಮಾಡುತ್ತಿದ್ದಾರೆ.

ಸಾಲ ಮನ್ನಾ ಇಂದಿನಿಂದ ಜಾರಿಯಾಗುತ್ತಿದ್ದು ಈ ಹಿನ್ನಲೆಯಲ್ಲಿ ಋಣಮುಕ್ತ ಪತ್ರ ವಿತರಣೆಯಾಗುತ್ತಿದೆ.

ಕೇಂದ್ರದಿಂದ ಬರಗಾಲ ಪರಿಹಾರ ಹಣ ಇನ್ನು ಕೂಡ ಬಂದಿಲ್ಲ.
ಪ್ರಕೃತಿ ವಿಕೋಪಕ್ಕೆ ಹಣ ಬಿಡುಗಡೆ ಬಗ್ಗೆ ಪತ್ರ ಬಂದಿದೆ ವಿನಃ ಹಣ ಬಂದಿಲ್ಲ ಎಂದು
ಚಾಮರಾಜನಗರದಲ್ಲಿ ಡಿಸಿಎಂ ಡಾ. ಪರಮೇಶ್ವರ ಹೇಳಿದ್ದಾರೆ.

LEAVE A REPLY

Please enter your comment!
Please enter your name here