ನವದೆಹಲಿ: ಸಂಸತ್ ಭವನದ ಹಾಲ್ ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನಾವರಣಗೊಳಿಸಿದ್ದಾರೆ.
ಸಂಸತ್ ಭವನದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಅಟಲ್ ಬಿಹಾರಿ ವಾಜಪೇಯಿ ಅವರ ತೈಲವರ್ಣದ ಚಿತ್ರಪಟವನ್ನು ಅನಾವರಣಗೊಳಿಸಿದರು.
ಈ ವೇಳೆ ವಾಜಪೇಯಿ ಅವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕೀಯದಲ್ಲಿ ಸುಧೀರ್ಘ ಪಯಣ ಸವೆಸಿದ್ದಾರೆ. ಅವರ ರಾಜಕೀಯ ಜೀವನದ ಬಹುತೇಕ ಭಾಗವನ್ನು ವಿಪಕ್ಷ ನಾಯಕನಾಗಿಯೇ ಕಳೆದಿದ್ದಾರೆ. ಜನಪರ ಅವರ ಧ್ವನಿಯನ್ನು ಯಾರಿಂದಲೂ ಸಾಧ್ಯವಾಗಿಲ್ಲ. ಅವರ ಸಿದ್ಧಾಂತಗಳು ಇತರರಿಗೆ ಆದರ್ಶವಾಗಿತ್ತು ಎಂದು ಹೇಳಿದರು.
ಅಂತೆಯೇ ವಿಪಕ್ಷ ನಾಯಕ ಕಾಂಗ್ರೆಸ್ ಪಕ್ಷದ ಮುಖಂಡ ಗುಲಾಂನಬಿ ಆಜಾದ್ ಅವರು ಮಾತನಾಡಿ, ವಿಪಕ್ಷಗಳ ಕುರಿತು ಅವರು ತೀವ್ರ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಅವರ ಮನಸ್ಸಿನಲ್ಲಿ ವಿಪಕ್ಷಗಳ ಕುರಿತು ಅವರ ಮನಸ್ಸಿನಲ್ಲಿ ಕೋಪವಿರುತ್ತಿರಲಿಲ್ಲ. ಕಲಾಪ ಮುಕ್ತಾಯ ಕೂಡಲೇ ನಗುನಗುತ್ತಾ ಮಾತನಾಡುತ್ತಿದ್ದರು ಎಂದು ಹೇಳಿದರು.
Summary
ನವದೆಹಲಿ : ಸಂಸತ್ ಹಾಲ್ ನಲ್ಲಿ ಅಜಾತಶತ್ರು ವಾಜಪೇಯಿ ಚಿತ್ರ ಅನಾವರಣ!
Article Name
ನವದೆಹಲಿ : ಸಂಸತ್ ಹಾಲ್ ನಲ್ಲಿ ಅಜಾತಶತ್ರು ವಾಜಪೇಯಿ ಚಿತ್ರ ಅನಾವರಣ!
Description
ಅವರ ಮನಸ್ಸಿನಲ್ಲಿ ವಿಪಕ್ಷಗಳ ಕುರಿತು ಅವರ ಮನಸ್ಸಿನಲ್ಲಿ ಕೋಪವಿರುತ್ತಿರಲಿಲ್ಲ. ಕಲಾಪ ಮುಕ್ತಾಯ ಕೂಡಲೇ ನಗುನಗುತ್ತಾ ಮಾತನಾಡುತ್ತಿದ್ದರು ಎಂದು ಹೇಳಿದರು.

LEAVE A REPLY

Please enter your comment!
Please enter your name here