ಮಕ್ಕಳು ನಾಟಕಗಳಲ್ಲಿ ತೊಡಗಿಸಿಕೊಂಡಾಗ ಅವರ ಆಂತರಿಕ ವ್ಯಕ್ತಿತ್ವ ವಿಕಸನವಾಗುವುದರೊಂದಿಗೆ ದೈಹಿಕ ಆರೋಗ್ಯವು ವೃದ್ಧಿಸುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾ ಬಾಲಭವನದಲ್ಲಿ ಇತ್ತೀಚೆಗೆ ಜರುಗಿದ 2 ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಾ, ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಜಿಲ್ಲಾ ಬಾಲಭವನವು ಆಯೋಜಿಸಿರುವ ಈ ಮಕ್ಕಳ ನಾಟಕೋತ್ಸವವು ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ಇಂತಹ ಮಕ್ಕಳ ನಾಟಕೋತ್ಸವಗಳು ನಡೆಯುವಂತಾಗಲಿ ಎಂದು ಆಶಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.ಪತ್ರಕರ್ತ ಉಗಮ ಶ್ರೀನಿವಾಸ್ ಮಾತನಾಡುತ್ತಾ ಶಿರಾ ತಾಲ್ಲೂಕಿನ ಒಂದು ಕುಗ್ರಾಮದ ಬಾಲಕಿಯ ಹೆಸರು ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸುದ್ದಿಯಾಗುತ್ತಾಳೆಂದರೆ ಅಂತಹ ಯಶಸ್ಸಿಗೆ ನಮ್ಮ ನಾಟಕೋತ್ಸವಗಳೆ ಕಾರಣ.

ಮಡಿಲು ಸೇವಾಟ್ರಸ್ಟ್‍ನ ಅರಸು, ಶಿಶು ಅಭಿವೃದ್ಧಿ ಅಧಿಕಾರಿ ರಜಿನಿ, ಶಮಂತಕಮಣಿ, ಬಾಲಭವನ ವ್ಯವಸ್ಥಾಪಕ ಎನ್.ಎಸ್.ಬಾಲಕೃಷ್ಣ, ರಂಗನಿರ್ದೇಶಕ ಡಮರುಗ ಉಮೇಶ್, ಕಾಂತರಾಜು, ಗಿರೀಶ್ ಉಪಸ್ಥಿತರಿದ್ದರು. ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕಿ ಮಮತ.ಪಿ ನಿರೂಪಿಸಿ ವಂದಿಸಿದರು

LEAVE A REPLY

Please enter your comment!
Please enter your name here