ನವದೆಹಲಿ: ಬಹುಕೋಟಿ ವಂಚನೆ ಆರೋಪಿ ಉದ್ಯಮಿ ನೀರವ್​ ಮೋದಿ ಅವರ ಟ್ವೀಟ್​ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ಎಂಬ ವಿಚಾರ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಮತ್ತೊಂದು ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ನೀರವ್​​ ಮೋದಿ ಮಾಡಿದ್ದಾರೆನ್ನಲಾದ ಟ್ವೀಟ್​ಗೆ ಪ್ರಧಾನಿ ಮೋದಿ ‘ಮೈ ಭೀ ಚೌಕಿದಾರ್​’ (ನಾನೂ ಕಾವಲುಗಾರ) ಅಭಿಯಾನದಲ್ಲಿ ಭಾಗವಹಿಸಿದ ನಿಮಗೆ ಧನ್ಯವಾದಗಳು ಎಂದು ರೀಟ್ವೀಟ್​ ಮಾಡಿದ್ದರು ಎಂದು ಹೇಳಲಾಗಿದೆ.

ನೀರವ್​ ಮೋದಿ ಹೆಸರನ್ನು ಟ್ಯಾಗ್​ ಮಾಡಲಾಗಿದ್ದ ಟ್ವೀಟ್​ ಅನ್ನು ನಂತರ ಡಿಲೀಟ್​ ಮಾಡಲಾಗಿದೆ ಎಂಬ​ ಆರೋಪವನ್ನೂ ಬಿಜೆಪಿ ವಿರುದ್ಧ ಕಾಂಗ್ರೆಸ್​ ವ್ಯಕ್ತಪಡಿಸಿದೆ.

ಮೋದಿ ಜೀ ಟ್ವೀಟ್​​ ಡಿಲೀಟ್ ಮಾಡಿದ್ಯಾಕೆ? ನೀವು ಚೌಕಿದಾರ್ ಆಗಿದ್ದರೇ (ಕಾವಲುಗಾರನೇ) ನೀರವ್​ ಮೋದಿ ನಮ್ಮ ದೇಶದಲ್ಲಿ ಯಾಕಿಲ್ಲ? ಎಂದು ಅಣಕಿಸಿದ್ದಾರೆ. ನಿಜವಾಗಿ ನೀವು ಚೌಕಿದಾರ್ ಎಂದು ಮೋದಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ಅಂಬಾನಿ, ಲಲಿತ್ ಮೋದಿ, ವಿಜಯ್‌ ಮಲ್ಯ ಮುಂತಾದ ಉದ್ಯಮಿಗಳ ರಕ್ಷಣೆ ಮಾಡುತ್ತಿದ್ದಾರೆ, ಲೂಟಿಕೋರರ ರಕ್ಷಣೆ ಮಾಡುತ್ತಿದ್ದಾರೆ ಎಂಬಂತೆ ಅವರ ಫೋಟೋಗಳನ್ನು ಎಡಿಟ್​ ಮಾಡಿ, ಲೂಟಿ ಮಾಡಿದ ಹಣವನ್ನು ಮಾಹಿತಿ ಸಮೇತ ಹಂಚಿಕೊಂಡಿದ್ದಾರೆ. ಅಲ್ಲದೆ, ರಮ್ಯಾ ಅವರ ಟ್ವೀಟ್​ ಅನ್ನು ನೆಟ್ಟಿಗರು ಟ್ರೋಲ್​ ಮಾಡಿ ಕಾಲೆಳೆದಿದ್ದಾರೆ.

ನೀರವ್​ ಮೋದಿ ಹೆಸರನ್ನು ಟ್ಯಾಗ್​ ಮಾಡಲಾಗಿದ್ದ ಟ್ವೀಟ್​ ಅನ್ನು ನಂತರ ಡಿಲೀಟ್​ ಮಾಡಲಾಗಿದೆ ಎಂಬ​ ಆರೋಪವನ್ನೂ ಬಿಜೆಪಿ ವಿರುದ್ಧ ಕಾಂಗ್ರೆಸ್​ ವ್ಯಕ್ತಪಡಿಸಿದೆ.

ನೀರವ್​ ಮೋದಿ ಹೆಸರನ್ನು ಬಿಜೆಪಿ ಉಲ್ಲೇಖಿಸಿದೆ ಎಂದು ಕಾಂಗ್ರೆಸ್​ ನಾಯಕರು ಹಾಗೂ ಇತರೆ ಪಕ್ಷದ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರ ನಡೆಸುತ್ತಿರುವ ಬೆನ್ನಲ್ಲೇ ನಮ್ಮ ವಿರೋಧಿಗಳು ಫೋಟೋಶಾಪ್​ ಚಿತ್ರವನ್ನು ಶೇರ್​ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್​ನ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ನೀರವ್​ ಮೋದಿಗೆ ಪ್ರಧಾನಿ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆನ್ನಲಾದ ಟ್ವೀಟ್​ನ ಸ್ಕ್ರೀನ್​ ಶಾಟ್​ ಚಿತ್ರವನ್ನು ಶನಿವಾರ ಶೇರ್​ ಮಾಡಿ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here