ಹುಬ್ಬಳ್ಳಿ,
ಮುಡಬಿದರಿಯ ರತ್ನಾಕರವರ್ಣಿ ವೇದಿಕೆಯ ಸಂತ ಶಿಶುನಾಳ ಸಭಾಂಗಣದಲ್ಲಿ ನ.೧೫, ರಿಂದ ೧೮ ರವರೆಗೆ ೧೫ ನೇ ವರ್ಷದ ಕನ್ನಡ ನಾಡು – ನುಡಿ – ಸಂಸ್ಕೃತಿಯ ಆಳ್ವಾಸ ನುಡಿಸಿರಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಆಳ್ವಾಸ ನುಡಿಸಿರಿ ಮಾಧ್ಯಮ ಸಂಯೋಜಕ ಪ್ರಸಾದ ಶೆಟ್ಟಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷ ತುಂಬ ವಿಭಿನ್ನವಾಗಿ ನುಡಿ ಸಿರಿಯನ್ನು ಮಾಡುತ್ತಿದ್ದೆವೆ. ಈ ಗೋಷ್ಠಿಯ ಉದ್ದೆಶ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರುತ್ತದೆ. ಹಾಗೂ ಇರರಿಗೆ ೧೦೦ ರೂ ಪ್ರವೇಶ ಇದ್ದು ೩ ದಿನದ ಎಲ್ಲ ವ್ಯವಸ್ಥೆ ಇರುತ್ತದೆ. ನ.೧೬ ರಂದು ಬೆಳ್ಳಿಗ್ಗೆ ೮:೩೦ ರಿಂದ ೯:೩೦ ರವರೆಗೆ ರಾಜ್ಯದ ಪ್ರತಿಷ್ಠಿತ ೮೫ ಸಾಂಸ್ಕೃತಿಕ ಕಲಾ ತಂಡಗಳಿಂದ ಭವ್ಯ ಮೆರವಣಿಗೆ ನಡೆಯುವದು ಮೆರವಣಿಗೆಯನ್ನು ಬರೋಡಾದ ಶಶಿಧರ ಶೆಟ್ಟಿ ಉದ್ಘಾಟನೆ ಮಾಡಲಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ ಧ್ವಜಾರೋಹಣ ನೇರವೆರಿಸುವರು, ಅಧ್ಯಕ್ಷತೆಯನ್ನು ಕನ್ನಡದ ಖ್ಯಾತ ಸಾಹಿತಿಗಳು ಡಾ. ಮಲ್ಲಿಕಾ ಎಸ್ ಘಂಟಿ ವಹಿಸುವರು, ಡಾ.ಷ.ಶೆಟ್ಟರ್, ನಳಿನ್ ಕುಮಾರ ಕಟೀಲು, ಎ.ಉಮಾನಾಥ ಕೊಟ್ಯಾನ್, ಕೆ.ಅಭಯಚಂದ್ರ ಜೈನ್, ಅಮರನಾಥ ಶೆಟ್ಟಿ, ಪ್ರದೀಪ್ ಕಲ್ಕೂರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಆಳ್ವಾಸ ನುಡಿಸಿರಿ ಪ್ರಧಾ ಕಲ್ಪನೆಯನ್ನು ಮುಂದಿಟ್ಟುಕೊಂಡಿದ್ದೆ ಈ ವರ್ಷ ಕರ್ನಾಟಕ ದರ್ಶನ : ಬಹುರೂಪಿ ಆಯಾಮಗಳು ಎಂಬ ಕಲ್ಪನೆಯ ಮೇಲೆ ಸಮ್ಮೇಳನ ನಡೆಯುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗೌರಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here