ಪಟ್ಟನಂತಿಟ್ಟ: ಮಕರವಿಳಕ್ಕು ಉತ್ಸವದ ಬಳಿಕ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಾಗಿಲು ಮಂಗಳವಾರ ತೆರೆಯಲಾಗಿದೆ.

ಮಾಸಿಕ ಪೂಜೆಗೆಂದು ಮಂಗಳವಾರ (ಫೆ.12) ಸಂಜೆ ತೆರೆಯಲಿರುವ ದೇವಸ್ಥಾನದಲ್ಲಿ ಐದು ದಿನಗಳ ಕಾಲ (ಫೆ.17ರವರೆಗೆ) ಕಲಾಭಿಷೇಕಂ, ಸಹಸ್ರಕಳಶಂ, ಲಕ್ಷ ಅರ್ಚನೆ ಸೇರಿ ಹಲವು ಪೂಜಾ ಕೈಂಕರ್ಯಗಳು ನಡೆಯಲಿದೆ.

ಪ್ರಧಾನ ಅರ್ಚಕ ವಾಸುದೇವನ್‌ ನಂಬೂದರಿ ಹಾಗೂ ಮುಖ್ಯ ಅರ್ಚಕ ಕಂದರಾರು ರಾಜೀವಾರು ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ನಡೆಯಲಿವೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಎರಡು ತಿಂಗಳ ಮಕರವಿಳಕ್ಕು ಉತ್ಸವದ ಬಳಿಕ ಜ. 20ರಂದು ದೇಗುಲಕ್ಕೆ ಬಾಗಿಲು ಹಾಕಲಾಗಿತ್ತು.

ಋುತುಮತಿ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶ ಖಂಡಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆ ಒಂದು ಹಂತಕ್ಕೆ ತಣ್ಣಗಾಗಿದ್ದರೂ ಮತ್ತೆ ಸಂಘರ್ಷ ಭುಗಿಲೇಳುವ ಆತಂಕ ಸೃಷ್ಟಿಯಾಗಿದೆ.

ದೇವಾಲಯದ ಬಾಗಿಲು ತೆರೆಯುತ್ತಿರುವುದರಿಂದ ಶಬರಿಮಲೆ ಸುತ್ತಮುತ್ತ ಕೇರಳ ಸರಕಾರ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಿದೆ. ಎಲ್ಲ ವಯೋಮಾನದ ಮಹಿಳೆಯರು ದರ್ಶನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಇದನ್ನು ವಿರೋಧಿಸಿ ಮತ್ತೆ ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆಗಳಿವೆ.

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಇಲಾಖೆ ಭದ್ರತೆಯನ್ನು ಬಿಗಿಗೊಳಿಸಿದೆ. ಭಕ್ತರಿಗೆ ಯಾವುದೇ ಅನನುಕೂಲ ಉಂಟಾಗಬಾರದೆಂಬ ಕಾರಣಕ್ಕೆ ನಿಲಕ್ಕಲ್‌ ಸೇರಿ ವಿವಿಧ ಪ್ರದೇಶಗಳಲ್ಲಿ ಹಲವು ನಿರ್ಬಂಧಗಳನ್ನು ಹೇರಿದೆ.

Summary
ಪಟ್ಟನಂತಿಟ್ಟ : ಶಬರಿಮಲೆ ಅಯ್ಯಪ್ಪ ದೇಗುಲ ಆರಂಭ: ಭಾರಿ ಬಂದೋಬಸ್ತ್‌ !
Article Name
ಪಟ್ಟನಂತಿಟ್ಟ : ಶಬರಿಮಲೆ ಅಯ್ಯಪ್ಪ ದೇಗುಲ ಆರಂಭ: ಭಾರಿ ಬಂದೋಬಸ್ತ್‌ !
Description
ಎಲ್ಲ ವಯೋಮಾನದ ಮಹಿಳೆಯರು ದರ್ಶನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಇದನ್ನು ವಿರೋಧಿಸಿ ಮತ್ತೆ ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆಗಳಿವೆ. 

LEAVE A REPLY

Please enter your comment!
Please enter your name here