ಕೋಲ್ಕತ : ಬಂಧನಕ್ಕೊಳಗಾಗಿರುವ  ನೀರವ್​ ಮೋದಿಯನ್ನು ವೆಸ್ಟ್​ ಮಿನ್​ಸ್ಟರ್ ಜಿಲ್ಲಾ ನ್ಯಾಯಾಲಯ, 29ರ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ. ‘ಐದು ವರ್ಷದ ಮಗುವನ್ನು ನೋಡಿಕೊಳ್ಳಬೇಕಿರುವುದರಿಂದ 4.53 ಕೋಟಿ ರೂ. (5 ಲಕ್ಷ ಪೌಂಡ್) ಭದ್ರತಾ ಠೇವಣಿ ಇರಿಸಲೂ ಸಿದ್ಧ. ಜಾಮೀನು ನೀಡಿ’ ಎಂಬ ನೀರವ್ ಕೋರಿಕೆಯನ್ನು ತಳ್ಳಿಹಾಕಿದ ನ್ಯಾಯಾಧೀಶೆ ಮೇರಿ ಮಲ್ಲನ್, ಜಾಮೀನು ನೀಡಿದರೆ ಆರೋಪಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.

ಚುನಾವಣೆ ಸಂದರ್ಭದಲ್ಲೇ ನೀರವ್​ ಮೋದಿ ಬಂಧನವಾಗಿದೆ. ಇದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಮತ್ತು ನೀರವ್​ ಬಂಧನ ಮೊದಲೇ ನಿರ್ಧಾರವಾಗುತ್ತೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಜತೆಗೆ 7 ಹಂತದ ಮತದಾನದ ಮಧ್ಯೆಯೇ ಬಿಜೆಪಿ ಇಂತಹುದೇ ಕೆಲವು ಸ್ಫೋಟಕ ಸುದ್ದಿಗಳು ಬಹಿರಂಗಗೊಳಿಸಲು ನಿರ್ಧರಿಸಿದೆ ಎಂದು ಮಮತಾ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here