ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳು ‘ಗೋ ಬ್ಯಾಕ್ ಮೋದಿ’ ಪ್ರತಿಭಟನೆ ಮಾಡುತ್ತಿದ್ದು, ಇದಕ್ಕೆ ತಿರುಗೇಟು ನೀಡಿರುವ ಪ್ರಧಾನಿ, ಘೋಷಣೆಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಹಾಗೂ ತಮಿಳುನಾಡಿನ ತಿರುಪ್ಪೂರ್​ನಲ್ಲಿ ಪ್ರಧಾನಿ ಸಾರ್ವಜನಿಕ ಸಭೆ ನಡೆಸಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏನಾದರೂ ಪ್ರಶ್ನೆ ಕೇಳಿದ ಬಳಿಕ ಶಿಕ್ಷಕರು ‘ಗೋ ಬ್ಯಾಕ್’ ಎನ್ನುತ್ತಿದ್ದರು. ಅದರರ್ಥ ನಮ್ಮ ಜಾಗಕ್ಕೆ ಮತ್ತೆ ಹೋಗುವುದು. ಈಗ ಚಂದ್ರಬಾಬು ನಾಯ್ಡು ಕೂಡ ‘ಗೋ ಬ್ಯಾಕ್ ಮೋದಿ’ ಹೇಳುತ್ತಿದ್ದಾರೆ. ನಾಯ್ಡು ಹೇಳಿದಂತೆ ನಾನು ಮತ್ತೆ ದೆಹಲಿಗೆ ಹೋಗಿ ಪ್ರಧಾನಿ ಹುದ್ದೆ ಮೇಲೆ ಕೂರುತ್ತೇನೆ. ಅವರು ಹೇಳಿದಂತೆ ದೇಶದ ಕೋಟ್ಯಂತರ ಮತದಾರರು ಮತ ಚಲಾಯಿಸುತ್ತಾರೆ. ಎರಡನೇ ಅವಧಿಗೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ತಿರುಗೇಟು ನೀಡಿದರು. ಪೋಲಾವರಂ ಹಾಗೂ ಅಮರಾವತಿ ಯೋಜನೆಯಲ್ಲಿ ಆಂಧ್ರಪ್ರದೇಶದ ಜನರಿಗಿಂತ ಚಂದ್ರಬಾಬು ನಾಯ್ಡು ಕುಟುಂಬಕ್ಕೆ ಹೆಚ್ಚು ಲಾಭವಾಗುತ್ತಿದೆ. ಹೀಗಾಗಿ ಇತ್ತೀಚೆಗೆ ಚಂದ್ರಬಾಬು ಅವರನ್ನು ನಾರಾ ಲೋಕೇಶ್ ತಂದೆ ಎಂದು ಕರೆಯುವವರು ಹೆಚ್ಚಾಗಿದ್ದಾರೆ. ದೆಹಲಿಯ ಚೌಕಿದಾರನು ಈ ಲೆಕ್ಕ ಕೇಳಿದ್ದರಿಂದಲೇ ನಾಯ್ಡುಗೆ ಬೇಸರವಾಗಿದೆ. ಅವಕಾಶಕ್ಕೆ ತಕ್ಕಂತೆ ಬಣ್ಣ ಬದಲಿಸುವುದು ನಾಯ್ಡು ಹವ್ಯಾಸವಾಗಿದೆ. ಮಾವ ಎನ್​ಟಿಆರ್​ಗೆ ಮೋಸ ಮಾಡಿದ ವ್ಯಕ್ತಿ ಎನ್​ಡಿಎಗೆ ಮೋಸ ಮಾಡದೇ ಇರುತ್ತಾರೆಯೇ ಎಂದು ಮೋದಿ ಪ್ರಶ್ನಿಸಿದ್ದಾರೆ.

Summary
ಪುನಃ ಪ್ರಧಾನಿ ಹುದ್ದೆ ಅಲಂಕರಿಸುವುದು ಎಂದ ನಮೋ !
Article Name
ಪುನಃ ಪ್ರಧಾನಿ ಹುದ್ದೆ ಅಲಂಕರಿಸುವುದು ಎಂದ ನಮೋ !
Description
ದೆಹಲಿಯ ಚೌಕಿದಾರನು ಈ ಲೆಕ್ಕ ಕೇಳಿದ್ದರಿಂದಲೇ ನಾಯ್ಡುಗೆ ಬೇಸರವಾಗಿದೆ. ಅವಕಾಶಕ್ಕೆ ತಕ್ಕಂತೆ ಬಣ್ಣ ಬದಲಿಸುವುದು ನಾಯ್ಡು ಹವ್ಯಾಸವಾಗಿದೆ. ಮಾವ ಎನ್​ಟಿಆರ್​ಗೆ ಮೋಸ ಮಾಡಿದ ವ್ಯಕ್ತಿ ಎನ್​ಡಿಎಗೆ ಮೋಸ ಮಾಡದೇ ಇರುತ್ತಾರೆಯೇ ಎಂದು ಮೋದಿ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here