ಹುಬ್ಬಳ್ಳಿ

ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರಿಗೆ ನೇರ ನೇಮಕಾತಿ, ನೇರ ವೇತ‌ನ ಹಾಗೂ ಬಾಕಿ ಮೊತ್ತವನ್ನು ಪಾವತಿಸುವಂತೆ ಆಗ್ರಹಿಸಿ ಡಿ.೧೨ ಕ್ಕೆ ಬೆಳಗಾವಿಯಲ್ಲಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೧ ರಿಂದ ಇಲ್ಲಿಯವರೆಗೂ ನಿರಂತರವಾಗಿ ಬಾಕಿ ವೇತನವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ, ಪಾಲಿಕೆ ಆಯುಕ್ತರಿಗೆ, ಪೋಲಿಸ್ ಆಯುಕ್ತರಿಗೆ, ಕಾರ್ಮಿಕ ಇಲಾಖೆಗೆ ಮನವಿಗಳನ್ನು ಸಲ್ಲಿಸುತ್ತಾ ಬಂದರು ೭ ವರ್ಷಗಳಾದರೂ ಬಾಕಿ ವೇತನ ಪಾವತಿಸದೆ ವಂಚಿಸಲಾಗಿದೆ. ಹಲವಾರು ಬಾರಿ ಪ್ರತಿಭಟನೆಗಳನ್ನು ಮಾಡಿದರೂ ಯಾವುದೇ ಪ್ರಯೋಜನೆಯಾಗಿಲ್ಲ ಈ ಎಲ್ಲ ಕಾರಣಗಳಿಂದ ಡಿ.೧೨ ರಂದು ಹು-ಧಾ ಮಹಾನಗರದ ಸುಮಾರು ೫೦೦ ಪೌರ ಕಾರ್ಮಿಕರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ, ಸಿಎಂ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗಮ್ಮ ಗೊಲ್ಲರ್, ಕಸ್ತೂರವ್ವ ಬೆಳಗುಂದಿ, ಲಕ್ಷ್ಮೀ ಗೂರನವರ, ಗಂಗಮ್ಮ ಸಿದ್ರಾಂಪುರ, ಸೋಮು ಮೊರಬದ, ಕನಕಪ್ಪ ಕೊಟಬಾಗಿ, ಬಸವರಾಜ ದೊಡಮನಿ ಇದ್ದರು.

:

LEAVE A REPLY

Please enter your comment!
Please enter your name here