ಅಹಮದಾಬಾದ್, ಜನವರಿ 11: ನಿರುದ್ಯೋಗ ನಿವಾರಣೆಗೆ ಕೋಟ್ಯಂತರ ಉದ್ಯೋಗ ಸೃಷ್ಟಿಯ ಭರವಸೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿಯೇ ಉದ್ಯೋಗದ ಕೊರತೆ ಉಂಟಾಗಿದೆ.

ಗುಜರಾತ್ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 4.05 ಲಕ್ಷ ಮಂದಿ ನಿರುದ್ಯೋಗಿಗಳಿದ್ದಾರೆ.

ಶಿಕ್ಷಣ ಇಲಾಖೆಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಶಿಕ್ಷಣ ಮುಗಿದ ಬಳಿಕ ಪ್ರತಿ ವರ್ಷ 1.25 ಲಕ್ಷ ಕೆಲಸ ಹುಡುಕಿಕೊಂಡು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ.

ವೈಬ್ರಂಟ್ ಗುಜರಾತ್ ಸಮ್ಮೇಳನದ ವೇಳೆ ಗುರುವಾರ ಕಾರ್ಮಿಕ ಮತ್ತು ಉದ್ಯೋಗ ವಲಯದ ಸೆಮಿನಾರ್‌ನಲ್ಲಿ ಈ ಮಾಹಿತಿಗಳನ್ನು ಗುಜರಾತ್‌ ಸರ್ಕಾರ ಈ ಮಾಹಿತಿಗಳನ್ನು ಬಿಡುಗಡೆ ಮಾಡಿದೆ.

2015ರಲ್ಲಿ ಗುಜರಾತ್‌ನಲ್ಲಿ ನೋಂದಣಿಯಾದ ನಿರುದ್ಯೋಗಿಗಳ ಸಂಖ್ಯೆ 7.80 ಲಕ್ಷ. ಇದಕ್ಕೆ ಹೋಲಿಸಿದರೆ ಕಳೆದ ವರ್ಷ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಕುಸಿತವಾಗಿದೆ. ಐಟಿಐನ ರೊಬೋಟಿಕ್ಸ್, ಥ್ರೀಡಿ ವಿನ್ಯಾಸ ಮತ್ತು ಇತರೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಪುಲ್ ಮಿತ್ರಾ ತಿಳಿಸಿದ್ದಾರೆ.

Summary
ಪ್ರಧಾನಿ Modi ತವರಲ್ಲೇ ತಾಂಡವವಾಡುತ್ತಿದೆ ನಿರುದ್ಯೋಗ
Article Name
ಪ್ರಧಾನಿ Modi ತವರಲ್ಲೇ ತಾಂಡವವಾಡುತ್ತಿದೆ ನಿರುದ್ಯೋಗ

LEAVE A REPLY

Please enter your comment!
Please enter your name here