ಬೆಂಗಳೂರು: ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಪ್ರತಿವರ್ಷ ನನ್ನ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಫ್ಯಾನ್ಸ್ ತರುವ ಹಲವು ಗಿಫ್ಟ್​ಗಳು ಖುಷಿ ಕೊಡುತ್ತದೆ ಎಂದು ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ತಿಳಿಸಿದ್ದಾರೆ.

ಸಾಲುಮರದ ತಿಮ್ಮಕ್ಕರಿಗೆ ಪದ್ಮಶ್ರೀ ದೊರಕಿರುವುದು ಖುಷಿ ಕೊಟ್ಟಿದೆ. ಈ ವರ್ಷದಿಂದ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಕೊಡಲು ಪ್ರಯತ್ನಿಸುವೆ ಎಂದು ಹೇಳಿದರು.

ಈ ವರ್ಷ ಯುವರತ್ನ ಬಿಡುಗಡೆಯಾಗುತ್ತದೆ. ಜೇಮ್ಸ್ ಚಿತ್ರೀಕರಣದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಜೇಮ್ಸ್ ಮೊದಲ ಪೋಸ್ಟರ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಅಭಿಮಾನಿಗಳ ಪ್ರೀತಿಗಿಂತ ಬೇರೆ ಗಿಫ್ಟ್ ಇಲ್ಲ. ಅಭಿಮಾನಿಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಅದೇ ಖುಷಿ ಎಂದರು.

ಅಭಿಮಾನಿಗಳ ದಂಡು

ಪ್ರತಿ ವರ್ಷದಂತೆ ಈ ಬಾರಿಯು ಸದಾಶಿವನಗರದಲ್ಲಿರುವ ಅಪ್ಪು ಮನೆ ಮುಂದೆ ಅಭಿಮಾನಿಗಳು ಜಮಾಯಿಸಿ ನೆಚ್ಚಿನ ನಟನಿಗೆ ಶುಭಾಶಯ ಕೋರಿದರು.

LEAVE A REPLY

Please enter your comment!
Please enter your name here