ದಾವಣಗೆರೆ: ಎಂಜಿನಿಯರಿಂಗ್‌ ಡಿಗ್ರಿ ಮುಗಿಸಿ ಐಪಿಎಸ್‌ ಪರೀಕ್ಷೆ ಬರೆದು ಪಾಸಾದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಇದೀಗ ಕನ್ನಡದ ಸೊಬಗಿಗೆ ಮನಸೋತು ಕನ್ನಡ ಎಂಎ ಪದವಿ ಪಡೆಯಲು ಮುಂದಾಗಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ಇವರು, 1ರಿಂದ 7 ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದರು. ಮೊದಲಿಂದ ಕನ್ನಡದ ಬಗ್ಗೆ ಅತೀವ ಆಸಕ್ತಿ ಇತ್ತು. ಹೀಗಾಗಿ ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ (ಕರೆಸ್ಪಾಂಡೆನ್ಸ್‌ ) ಪಡೆಯುತ್ತಿದ್ದಾರೆ.

ಬಳ್ಳಾರಿಯಲ್ಲಿ ಎಸ್ಪಿಯಾಗಿದ್ದ ಇವರು 2017ರ ಡಿಸೆಂಬರ್‌ನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಪರೀಕ್ಷೆ ಎದುರಿಸಿದರು. 2018ರ ನವೆಂಬರ್‌ನಲ್ಲಿ ದಾವಣಗೆರೆಯಲ್ಲಿ ಎರಡನೇ ವರ್ಷದ ಎಂಎ ಕನ್ನಡ ಪರೀಕ್ಷೆ ಬರೆದರು.

ತಂದೆ ಪ್ರೇರಣೆ: ಕೃಷಿಕರಾದ ತಂದೆ ರಂಗಪ್ಪ, ತಾಯಿ ಸರೋಜಮ್ಮರ ಪುತ್ರರಾದ ಎಸ್ಪಿ ಆರ್‌.ಚೇತನ್‌ರಿಗೆ ಕನ್ನಡ ಎಂಎ ಓದಲು ತಂದೆಯೇ ಪ್ರೇರಣೆ. ತಂದೆ ಪುಸ್ತಕ ಪ್ರೇಮಿಯಾಗಿದ್ದರು. ಕನ್ನಡ ಪುಸ್ತಕಗಳನ್ನು ಓದುತ್ತಿದ್ದರು. ಪೂರ್ಣಚಂದ್ರ ತೇಜಸ್ವಿ , ಕುವೆಂಪು, ಗಿರೀಶ್‌ ಕಾರ್ನಾಡ್‌, ಭೈರಪ್ಪ ಮತ್ತಿತರ ಲೇಖಕರ ಪ್ರಸಿದ್ಧ ಕೃತಿಗಳನ್ನು ಓದಿದ್ದಾರೆ.

LEAVE A REPLY

Please enter your comment!
Please enter your name here