ಬಿಗ್ ಬ್ರೇಕಿಂಗ್ :”ಬಂಧನ ಭೀತಿ ಹಿನ್ನಲೆ, ಇಂದು ಮಧ್ಯಾಹ್ನವೇ ಸಿಸಿಬಿ ಮುಂದೆ ಜನಾರ್ದನ ರೆಡ್ಡಿ ಹಾಜರ‍್?

0
2
views

ಬೆಂಗಳೂರು : ಚಿನ್ನದ ಗಟ್ಟಿ ಹಾಗೂ ಆಂಬಿಡೆಂಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಕೆಲದಿನಗಳಿಂದ ನಾಪತ್ತೆಯಾಗಿದ್ದು ಇಂದು ಮಧ್ಯಾಹ್ನ ಬೆಂಗಳೂರಿನ ಸಿಸಿಬಿ ಕಚೇರಿಗೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ಇನ್ನು ಶುಕ್ರವಾರ ಬೆಂಗಳೂರಿನ 61ನೇ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಜನಾರ್ದನ ರೆಡ್ಡಿ ಪರ ವಕೀಲ ಸಿ.ಎಚ್‌. ಹನುಮಂತರಾಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಈ ವೇಳೆ ಮಾನ್ಯ ನ್ಯಾಯಾಪೀಠ ನೀವು ಬಂಧಿಸಿಸುತ್ತಾರಂತೆ ಯಾಕೆ ಅಂದುಕೊಂಡಿದ್ದೀರಾ? ವಿಚಾರಣೆಗೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೋಲಿಸರಿಗೆ ಮಾಹಿತಿ ನೀಡಬಹುದಾಗಿತ್ತು ತಾನೇ ಅಂತ ಪ್ರಶ್ನೆ ಮಾಡಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.

LEAVE A REPLY

Please enter your comment!
Please enter your name here