ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಕುರಿತು ಬಿಎಸ್‌ಪಿ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಅವರ ನಿರ್ಧಾರವನ್ನು ಹಿಂಪಡೆಯಲು ಹೇಳಿರುವುದಕ್ಕೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದ ಅವರು, ಚುನಾವಣೆಯ ನಂತರ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಬಿಎಸ್‌ಪಿ ಸಂಸದರಲ್ಲಿ ಒಬ್ಬರ ಸ್ಥಾನವನ್ನು ತೆರವುಗೊಳಿಸಿ ಲೋಕಸಭೆಗೆ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.

ಇದುವರೆಗೂ ನಾಲ್ಕು ಬಾರಿ ಲೋಕಸಭೆಗೆ ಮತ್ತು ಎರಡು ಬಾರಿ ಉತ್ತರ ಪ್ರದೇಶದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಮತ್ತು ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ. ಲೋಕಸಭೆಯಿಂದ ನಾನು ಸ್ಪರ್ಧಿಸಲು ತೀರ್ಮಾನಿಸಿ ನಾಮಪತ್ರವನ್ನು ಸಲ್ಲಿಸಿದರೆ ಸಾಕು ಪಕ್ಷದ ಕಾರ್ಯಕರ್ತರೇ ಜಯವನ್ನು ತಂದುಕೊಡುತ್ತಾರೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹಾಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಬಿಜೆಪಿಯನ್ನು ಸೋಲಿಸಲು ದೇಶಾದ್ಯಂತ ಚುನಾವಣೆ ಪ್ರಚಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೇನೋ ಸ್ಪರ್ಧಿಸುತ್ತಿಲ್ಲ. ಆದರೆ, ಪ್ರಧಾನಿಯಾಗಬೇಕೆನ್ನುವ ತನ್ನ ಮಹತ್ವಾಕಾಂಕ್ಷೆಯನ್ನು ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, 1995ರಲ್ಲಿ ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾಗ ಉತ್ತರಪ್ರದೇಶ ವಿಧಾನಸಭೆ ಅಥವಾ ಪರಿಷತ್‌ಗಾಗಲಿ ಸದಸ್ಯೆಯಾಗಿರಲಿಲ್ಲ. ಅದರಂತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಂತೆಯೂ ಪ್ರಧಾನಿಯಾಗುವ ಅವಕಾಶವಿದೆ. ಪ್ರಧಾನಿಯಾದ ಆರು ತಿಂಗಳೊಳಗೆ ಲೋಕಸಭೆ ಅಥವಾ ರಾಜ್ಯಸಭೆಗೆ ಚುನಾಯಿತರಾಗಿ ಬರಬೇಕಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆನ್ನುವ ನನ್ನ ನಿರ್ಧಾರದಿಂದ ನಿರಾಶೆಗೊಳ್ಳಬೇಡಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here