ನವದೆಹಲಿ: ಬಿಜೆಪಿಯ ರೆಬೆಲ್‌ ಸಂಸದನಾದ ಮಧ್ಯಪ್ರದೇಶದ ಪಾಟ್ನಾ ಸಾಹೀಬ್‌ ಕ್ಷೇತ್ರದ ಸಂಸದ ಶತ್ರುಜ್ಞ ಸಿನ್ಹಾ ಪಕ್ಷ ಬಿಡುವ ಸೂಚನೆಯನ್ನು ನೀಡಿದ್ದು, ಯಾವ ಪಕ್ಷಕ್ಕೆ ಸೇರಬೇಕು ಎಂಬುದರ ಬಗ್ಗೆ ಅವರು ಮಾ. 22ಕ್ಕೆ ತಿಳಿಸುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ ತಾನು ಎರಡು ಬಾರಿ ಆಯ್ಕೆಯಾಗಿದ್ದ ಪಾಟ್ನಾ ಸಾಹೀಬ್​ ಲೋಕಸಭಾ ಕ್ಷೇತ್ರದಿಂದಲೇ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಪಾಟ್ನಾ ಸಾಹೀಬ್​ ಕ್ಷೇತ್ರದಲ್ಲಿ ಮೇ 19ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಏನಾಗುತ್ತದೆ ಎಂದು ಕಾಯ್ದು ನೋಡಿ. ಯಾವುದೇ ಊಹಾಪೋಹ ಅಗತ್ಯವಿಲ್ಲ. ಎಲ್ಲವೂ ಮಾ. 22ಕ್ಕೆ ಬಗೆಹರಿಯಲಿದ್ದು, 2019ರ ಸಾರ್ವತ್ರಿಕ ಚುನಾವಣೆಗೆ ನಾನು ಪಾಟ್ನಾ ಶಾಹಿಬ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ. ನನ್ನ ಸೋದರರು ಮತ್ತು ಹಿತೈಷಿಗಳೊಂದಿಗೆ ಚರ್ಚಿಸಿ ಮುಂದುವರಿಯುತ್ತೇನೆ ಎಂದು ಸಿನ್ಹಾ ತಿಳಿಸಿದ್ದಾರೆ.

ನಾನು ಯಾವುದೇ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದರೂ ಕೂಡ ಗೆಲ್ಲುತ್ತೇನೆ. ಆದರೆ ಎರಡು ಭಾರಿ ಆಯ್ಕೆಯಾಗಿದ್ದ ಕ್ಷೇತ್ರವು ನನ್ನ ಹೃದಯಕ್ಕೆ ಹತ್ತಿರವಾಗಿದೆ ಮತ್ತು ಅಲ್ಲಿನ ಜನರೊಂದಿಗೆ ಸುದೀರ್ಘ ಬಂಧವಿದೆ ಎಂದು ಹೇಳಿದ್ದಾರೆ.

ನಟರಾಗಿದ್ದು ರಾಜಕೀಯಕ್ಕೆ ಧುಮುಕಿದ್ದ ಶತ್ರುಜ್ಞ ಸಿನ್ಹಾ 2009ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶೇಖರ್‌ ಸುಮನ್‌ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದರು. ಪಕ್ಷವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದ ಸಿನ್ಹಾರಿಂದ ಬಿಜೆಪಿ ಅಂತರ ಕಾಯ್ದುಕೊಳ್ಳುತ್ತಲೇ ಬಂದಿತ್ತು. ಇದೀಗ ಅಧಿಕೃತವಾಗಿ ಶತ್ರುಜ್ಞ ಸಿನ್ಹಾ ಪಕ್ಷ ಬಿಡಲು ಸಿದ್ಧವಾಗಿದ್ದಾರೆ.

LEAVE A REPLY

Please enter your comment!
Please enter your name here