ಬೆಂಗಳೂರು: ಈಗಾಗಲೇ ಸರ್ಕಾರ ಪೆಟ್ರೋಲ್, ವಿದ್ಯುತ್ ದರ ಹೆಚ್ಚಿಸಿ ಜನ ಸಾಮನ್ಯರಿಗೆ ಶಾಕ್ ನೀಡಿತ್ತು, ಇದೀಗ ಸದ್ಯದಲ್ಲೇ ನೀರಿನ ದರವನ್ನೂ ಏರಿಕೆ ಮಾಡಿ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ದರ ಹೆಚ್ಚಳಕ್ಕೆ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕರ ಸಲ್ಲಿಸಲಿದೆ. ಶೇ.30-35ರಷ್ಟು ನೀರಿನ ದರ ಹೆಚ್ಚಳವಾಗಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಏರಿಕೆ ಆಗಿಲ್ಲ ಜಲಮಂಡಳಿಯು ಕಳೆದ ನಾಲ್ಕು ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಮಾಡಿಲ್ಲ, ಈ ಅವಧಿಯಲ್ಲಿ ವಿದ್ಯುತ್ ದರ ಹಲವು ಬಾರಿ ಏರಿಕೆಯಾಗಿದ್ದು, ಜಲಮಂಡಳಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಹಾಗಾಗಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ಗೃಹ,ವಾಣಿಜ್ಯ ಬಳಕೆ ನೀರಿನ ಶುಲ್ಕದಿಂದ ಬರುವ ಆದಾಯ ಜಲ ಮಂಡಳಿಗೆ ಗೃಹ ಹಾಗೂ ವಾಣಿಜ್ಯ ಬಳಕೆ ನೀರಿನ ಶುಲ್ಕದಿಂದ ಮಾಸಿಕ ಸುಮಾರು 100 ಕೋಟಿ ರೂ ಆದಾಯ ಸಂಗ್ರಹವಾಗುತ್ತಿದೆ. ಈ ಪೈಕಿ ಮಾಸಿಕ ಸುಮಾರು 60 ಕೋಟಿ ರೂ ವಿದ್ಯುತ್ ಶುಲ್ಕಕ್ಕೆ ಹೋಗುತ್ತದೆ. ಉಳಿದ ಹಣ ಮಂಡಳಿಯ ನಿರ್ವಹಣೆ, ಮೂಲಸೌಕರ್ಯ ನಿರ್ವಹಣೆಗೆ ವ್ಯಯವಾಗುತ್ತದೆ.

ವರ್ಷದಲ್ಲಿ ಹಲವು ಬಾರಿ ವಿದ್ಯುತ್ ದರ ಏರಿಕೆ ವರ್ಷದಲ್ಲಿ ಹಲವು ಬಾರಿ ವಿದ್ಯುತ್ ದರ ಏರಿಕೆಯಾಗಿರುವುದರಿಂದ ಆರ್ಥಿಕ ಹೊರೆಯೂ ಹೆಚ್ಚಾಗಿದೆ. ಅಲ್ಲದೆ, ಜಲಮಂಡಳಿಯು ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಭಾರಿ ಪ್ರಮಾಣದ ಹಣದ ಅಗತ್ಯವಿದೆ. ಈ ಎಲ್ಲಾ ಕಾರಣಗಳಿಂದ ನೀರಿನ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಗದಿತ ಅವಧಿಯಲ್ಲಿ ದರ ಹೆಚ್ಚಿಸಬೇಕೆಂಬ ನಿಯಮವಿಲ್ಲ ಕಳೆದ ನಾಲ್ಕು ವರ್ಷಗಳಿಂದ ಒಮ್ಮೆಯೂ ನೀರಿನ ದರ ಪರಿಷ್ಕರಣೆಯಾಗಿಲ್ಲ, ಪ್ರತಿ ವರ್ಷ, ಮೂರು ವರ್ಷ, ಐದು ವರ್ಷ ಹೀಗೆ ನಿಗದಿತ ಅವಧಿಯಲ್ಲಿ ನೀರಿನ ದರ ಹೆಚ್ಚಳ ಮಾಡಬೇಕೆಂಬ ಯಾವುದೇ ನಿಯಮವೂ ಇಲ್ಲ, ಮಾಸಿಕ ಸಂಗ್ರಹವಾಗುವ ಆದಾಯದಲ್ಲಿ ಬಹುಪಾಲು ವಿದ್ಯುತ್ ಶುಲ್ಕಕ್ಕೆ ಹೋಗುವುದರಿಂದ ಜಲಮಂಡಳಿಗೆ ಸಮಸ್ಯೆ ಉಂಟಾಗಿದೆ.

Summary
ಬೆಂಗಳೂರಲ್ಲಿ ನೀರಿನ ದರ ಏರಿಕೆ ಸಾಧ್ಯತೆ
Article Name
ಬೆಂಗಳೂರಲ್ಲಿ ನೀರಿನ ದರ ಏರಿಕೆ ಸಾಧ್ಯತೆ
Description
ನಿಗದಿತ ಅವಧಿಯಲ್ಲಿ ದರ ಹೆಚ್ಚಿಸಬೇಕೆಂಬ ನಿಯಮವಿಲ್ಲ ಕಳೆದ ನಾಲ್ಕು ವರ್ಷಗಳಿಂದ ಒಮ್ಮೆಯೂ ನೀರಿನ ದರ ಪರಿಷ್ಕರಣೆಯಾಗಿಲ್ಲ, ಪ್ರತಿ ವರ್ಷ, ಮೂರು ವರ್ಷ, ಐದು ವರ್ಷ ಹೀಗೆ ನಿಗದಿತ ಅವಧಿಯಲ್ಲಿ ನೀರಿನ ದರ ಹೆಚ್ಚಳ ಮಾಡಬೇಕೆಂಬ ಯಾವುದೇ ನಿಯಮವೂ ಇಲ್ಲ, ಮಾಸಿಕ ಸಂಗ್ರಹವಾಗುವ ಆದಾಯದಲ್ಲಿ ಬಹುಪಾಲು ವಿದ್ಯುತ್ ಶುಲ್ಕಕ್ಕೆ ಹೋಗುವುದರಿಂದ ಜಲಮಂಡಳಿಗೆ ಸಮಸ್ಯೆ ಉಂಟಾಗಿದೆ.

LEAVE A REPLY

Please enter your comment!
Please enter your name here