ಉತ್ತರ ಕರ್ನಾಟಕದ ಪ್ರತಿಷ್ಠಿತ ಕರ್ನಾಟಕ ಕಾನೂನು ಸಂಸ್ಥೆಯ “ರಾಜಾ ಲಖಮಗೌಡ” ಕಾನೂನು ಮಹಾವಿದ್ಯಾಲಯ ಅಮೃತ ಮಹೋತ್ಸವವನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಉದ್ಘಾಟಿಸಿದರು. ರಾಷ್ಟ್ರಪತಿಗಳ ಜೊತೆಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಚೀಪ್ ಜಸ್ಟಿಸ್ ಆಪ್ ಇಂಡಿಯಾ ದೀಪಕ ಮಿಶ್ರಾ, ಸುಪ್ರೀಂ ಕೋರ್ಟ ನ್ಯಾಯಾಧೀಶರು, ರಾಜ್ಯಪಾಲ ವಜುಬಾಯಿ ವಾಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿಗಳು, ಕುಂದಾನಗರಿಗೆ ಇದು ನನ್ನ ಮೊದಲ ಭೇಟಿ. 75 ನೇ ವರ್ಷದ ಆರ್.ಎಲ್ ಲಾ ಕಾಲೇಜಿನ ಅಮೃತ್ ಮಹೋತ್ಸವದಲ್ಲಿ ಭಾಗವಹಿಸಿದ್ದಕ್ಕೆ ಸಂತಸವಾಗುತ್ತಿದೆ ಎಂದರು.
ರಾಮನಾಥ ಕೋವಿಂದ. ರಾಷ್ಟ್ರಪತಿಗಳು

ಇನ್ನು ಇದಕ್ಕೂ ಮೊದಲು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಜಾರಕಿಹೊಳಿ ಸಹೋದರರ ನಡೆಗೆ ಸಿಎಂ ಕುಮಾರಸ್ವಾಮಿ ಮಾತುಕತೆಯ ಮೂಲಕ ತಿಲಾಂಜಲಿ ಇಡ್ತಾರೆ ಅನ್ನೊ ಮಾತು ಕೇಳಿ ಬಂದಿತ್ತು. ಆದ್ರೆ ಇಂದು ಸಿಎಂ ಕುಮಾರಸ್ವಾಮಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಿದ ಬೆಳಗಾವಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಲ್ಲಿಂದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ತಮ್ಮದೇ ಖಾಸಗಿ ವಾಹನದಲ್ಲಿ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದ್ರು. ಇದಕ್ಕೂ ಮೊದಲು ಸಚಿವರು ಸ್ವಾಗತಿಸುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ತಮ್ಮ ಎರಡು ಕೈಗಳಿಂದ ರಮೇಶ್ ಜಾರಕಿಹೊಳಿಯವರ ಕೆನ್ನೆ ಸವರಿ ನಗುತ್ತಲೇ ಮಾತನಾಡುತ್ತ ಎಲ್ಲೋ ಸಮಾಧಾನ ಮಾಡುವ ಪ್ರಯತ್ನ ಮಾಡಿದಂತಿತ್ತು.

ಅತ್ತ ವಿಮಾನ ನಿಲ್ದಾಣದಲ್ಲಿ ಸಿಎಂ ಕುಮಾರಸ್ವಾಮಿಯವರನ್ನ ಸ್ವಾಗತಿಸಲು ಬಂದಿದ್ದ ಸಚಿವ ರಮೇಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕೆಲ ಹೊತ್ತು ವಿಮಾನ ನಿಲ್ದಾಣದಲ್ಲಿಯೇ ಇದ್ದರೂ ಪರಸ್ಪರ ಹಾವು-ಮುಂಗುಸಿಂತೆಯೇ ಇದ್ರು. ಆದ್ರೆ ನಂತರ ಆರ್.ಎಲ್.ಲಾ ಕಾಲೇಜಿನ ಸಮಾರಂಭದಲ್ಲಿ ಅಕ್ಕ-ಪಕ್ಕದ ಆಸನದಲ್ಲಿ ಕುಳಿತ ರಾಜಕೀಯ ಬದ್ದ ವೈರಿಗಳಾದ ಶಾಸಕ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪರಸ್ಪರ ಮಾತನಾಡುವ ಮೂಲಕ ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ್, ಸತೀಶ್ ಜಾರಕಿಹೊಳಿ ಪಕ್ಕ ಕುಳಿತಿದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಲೆಟಾಗಿ ಬಂದಿದ್ದೇನೆ. ಖುರ್ಚಿ ಖಾಲಿ ಇತ್ತು ಕುಳಿತಿದ್ದೇನೆ ಅನ್ನುವ ಮೂಲಕ ಆದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ರು.

ಇನ್ನು ಆರ್.ಎಲ್.ಲಾ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮ ಮುಕ್ತಾಯದ ಬಳಿಕ ನಗರದ ನೆಹರು ನಗರದಲ್ಲಿ ನಿರ್ಮಾಣಗೊಂಡಿದ್ದ ಕನ್ನಡ ಭವನವನ್ನ ಸಿಎಂ ಕುಮಾರಸ್ವಾಮಿ ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಳೂರು ನಗರದ ನಂತರ ಬೆಳಗಾವಿಯಲ್ಲಿ ಸಾಂಸ್ಕ್ರತಿಕ ಕನ್ನಡ ಭವನ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಬೆಳಗಾವಿಗೂ ನನಗೂ ಅವಿನಾಭಾವ ಸಂಬಂಧ ಇದೆ ಎಂದ್ರು. ಈ ಭಾಗದ‌ ಜನರಲ್ಲಿ ಅಸಮಧಾನ ಇದೆ. ನನಗೆ ಗೊತ್ತು. 400 ಕೋಟಿ ವೆಚ್ಚದಲ್ಲಿ ಸುವರ್ಣ ಸೌಧದ ನಿರ್ಮಿಸಿದ್ದು ಅಲ್ಲಿ ಕೆಲ ಕಚೇರಿಗಳನ್ನು ಸ್ಥಳಾಂತರಿಸಲು ಮೈತ್ರಿ ಸರ್ಕಾರದ ಸ್ನೇಹಿತರೊಂದಿಗೆ ಚರ್ಚಿಸಿ ಸದ್ಯದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು. ಈ ಸರ್ಕಾರ 5 ವರ್ಷ ಸುಭದ್ರವಾಗಿ ಆಡಳಿತ ನಡೆಸಲಾಗುವುದು. ನಾಡಿನ ಸರ್ವೋತುಮುಖ ಅಭಿವೃದ್ಧಿ ಗೆ ದಿನಗಳು ಪ್ರಾರಂಭವಾಗುತ್ತವೆ. ಯಾವುದೇ ರೀತಿಯ ಸಮಸ್ಯೆಗಳು ಸರಕಾರದಲ್ಲಿ ಇಲ್ಲ. ಸರಕಾರ ಇಂದು ಉರುಳುತ್ತೋ ನಾಳೆ ಉರುಳುತ್ತೊ ಎಂದು ಹೇಳುತ್ತಿದ್ದಾರೆ ಸರ್ಕಾರ ಸುಭದ್ರವಾಗಿದೆ ಎಂದರು.

ಇನ್ನು ಮೈತ್ರಿ ಸರಕಾರದಲ್ಲಿ 45 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು, ಈ ಸರಕಾರದಲ್ಲಿ ಹಣ ಇಲ್ಲ ಎಂಬ ಭಾವನೆ ಮೂಡಿಸಲಿಕ್ಕೆ ಪ್ರಯತ್ನಿಸುತ್ತಿದ್ದಾರೆ. ಸರಕಾರದಲ್ಲಿ ಹಣದ ಕೊರತೆ ಇಲ್ಲ ಸರಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತೇನೆ. ಯಾವ ಮಾತಿಗೆ ಕಿವಿಗೊಡಬೇಡಿ. ನಾಡಿನ ಜನತೆಗೆ ಯಾವುದೇ ಅಭಿವೃದ್ದಿಗೆ ತೊಂದರೆಯಾಗದಂತೆ ಸಾಲ ಮನ್ನಾ ಮಾಡುತ್ತೇನೆ. ಮಹದಾಯಿ ಯೋಜನೆ ಸಂಬಂಧಪಟ್ಟಂತೆ ಯಾವ ರೀತಿ ಕಾನೂನು ಕ್ರಮ ಮತ್ತು ಮುಂದಿನ ನಿರ್ಣಯ ಕೈಗೊಳ್ಳುವ ಬಗ್ಗೆ ಚರ್ಚಿಸಿದ್ದು, ಹತ್ತರಿಂದ ಹದಿನೈದು‌ ದಿನದೊಳಗೆ ತಿಳಿಸಲಾಗುವುದು. ಹಾಗೂ ಮಹದಾಯಿ ಹೋರಾಟದಲ್ಲಿ ರೈತರ ಮೇಲೆ ಕೇಸ್ ಹಾಕಿದ್ದನ್ನು ಹಿಂಪಡೆಯುವುದು ನಮ್ಮ ಜವಾಬ್ದಾರಿ ಎಂದರು.

ಒಟ್ನಲ್ಲಿ ಸಿಎಂ ಕುಮಾರಸ್ವಾಮಿಯವ್ರು ಉತ್ತರ ಕರ್ನಾಟಕದ ಜನತೆಗೆ ಸ್ವಚ್ಛ ಸುಭದ್ರ ಆಡಳಿತದ ಭರವಸೆ ನೀಡಿದ್ದು, ಜಾರಕಿಹೊಳಿ ಸಹೋದರರ ಭೇಟಿಯಿಂದ ದೂರ ಉಳಿದಿದ್ದಾರೆ..

LEAVE A REPLY

Please enter your comment!
Please enter your name here