ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರವನ್ನು ತೊರೆದು ರಾಜಕೀಯ ಕಣಕ್ಕಿಳಿದಿದ್ದ ಮೀರಾ ಸನ್ಯಾಲ್ ನಿಧನರಾಗಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ 57 ವರ್ಷದ ಮೀರಾ ಸನ್ಯಾಲ್ ಕೊನೆಯುಸಿರೆಳೆದಿದ್ದಾರೆ. ಇವರು ಮೊದಲು ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್​ನ ಚೀಫ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ಹಿಸುತ್ತಿದ್ದರು. ಸನ್ಯಾಲ್ ಮೂಲತಃ ಕೇರಳದ ಕೊಚ್ಚಿಯವರಾಗಿದ್ದು, ಸುಮಾರು 30 ವರ್ಷ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಂತರ ರಾಜಕೀಯದತ್ತ ವಾಲಿದ್ದರು. ಆಮ್ ಆದ್ಮಿ ಪಕ್ಷ ಸೇರಿ, 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು. ಕಳೆದೆರಡು ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮೀರಾ ನಿನ್ನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸನ್ಯಾಲ್ ಅವರ ನಿಧನಕ್ಕೆ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಟ್ವೀಟರ್​ ಮೂಲಕ ಸಂತಾಪ ಸೂಚಿಸಿದ್ದಾರೆ. ದೇಶವು ಉತ್ತಮ ಬುದ್ಧಿಶಕ್ತಿ ಹೊಂದಿದ್ದ ಆರ್ಥಿಕ ತಜ್ಞೆಯೊಬ್ಬರನ್ನು ಕಳೆದುಕೊಂಡಿದೆ ಅಂತಾ ಅವರು ಬರೆದುಕೊಂಡಿದ್ದಾರೆ.

Summary
ಬ್ಯಾಂಕಿಂಗ್ ಕ್ಷೇತ್ರ ತೊರೆದು 'ರಾಜಕೀಯಕ್ಕೆ ಬಂದಿದ್ದ ಮೀರಾ ಇನ್ನಿಲ್ಲ'?
Article Name
ಬ್ಯಾಂಕಿಂಗ್ ಕ್ಷೇತ್ರ ತೊರೆದು 'ರಾಜಕೀಯಕ್ಕೆ ಬಂದಿದ್ದ ಮೀರಾ ಇನ್ನಿಲ್ಲ'?

LEAVE A REPLY

Please enter your comment!
Please enter your name here