ಭಟ್ಕಳ: ಸಕ್ಸಂ ಸೈಕ್ಲೋಥ್ಯಾನ್, ರಂಜನ್ ಇಂಡೇನ್ ಏಜೆನ್ಸಿ, ರಫಾತ್ ಏಜೆನ್ಸಿ, ಗಾಡ್​ವಿನ್ ಸೈಕಲ್ ಟ್ರೇಡಿಂಗ್ ಕಂಪನಿ ವತಿಯಿಂದ ಭಾನುವಾರ ಬೆಳಗ್ಗೆ 7.30ರಿಂದ 9.30ರವರೆಗೆ ‘ಇಂಧನ ಉಳಿಸಿ ಪರಿಸರ ಬೆಳಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸೈಕಲ್ ಜಾಥಾ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವಾನಿ ಶಾಂತರಾಮ ಮಾತನಾಡಿ, ಆಧುನಿಕತೆಯೊಂದಿಗೆ ಪೈಪೋಟಿಗೆ ಇಳಿದಿರುವ ಮಾನವ ಸಮುದಾಯ ಇಂದು ಒಂದು ಹೆಜ್ಜೆ ಇಡಲು ವಾಹನದ ಆಸರೆ ಬಯಸುತ್ತಿದೆ. ಪರಿಸ್ಥಿತಿ ಹೀಗೆಯೆ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆ ಅಪಯಕಾರಿ ಸನ್ನಿವೇಶ ಅನುಭವಿಸಬೇಕಾಗುತ್ತದೆ. ಇಂದು ಒಂದು ದಿನ ಮಾತ್ರವಲ್ಲ ಕನಿಷ್ಠ ವಾರದಲ್ಲಿ 1 ದಿನವಾದರೂ ಸೈಕಲ್ ಬಳಸಲು ರೂಢಿ ಮಾಡಿಕೊಳ್ಳಬೇಕು ಎಂದರು.

ಸಿಪಿಐ ಗಣೇಶ ಕೆ.ಎಲ್., ಪಿಎಸ್​ಐ ಕುಸುಮಾಧರ, ತಾಪಂ ಸದಸ್ಯ ಹನುಮಂತ ನಾಯ್ಕ ಸೇರಿ 300ಕ್ಕೂ ಅಧಿಕ ಸೈಕ್ಲಿಸ್ಟ್​ಗಳು ಭಾಗವಹಿಸಿದ್ದರು. ತಾಲೂಕಿನ ಪೊಲೀಸ್ ಗ್ರೌಂಡ್​ನಿಂದ ಆರಂಭವಾದ ಜಾಥಾ ರಂಗಿನಕಟ್ಟೆ, ಹನೀಫಾಬಾದ ಶಮ್್ಸ ಶಾಲೆ, ತಾಲೂಕು ಕ್ರೀಡಾಂಗಣ ಮೂಲಕ ಪುನಃ ಪಟ್ಟಣ ಸೇರಿತು. ಮೊದಲು ಹೆಸರು ನೋಂದಾಯಿಸಿದ 100 ಜನರಿಗೆ ಉಚಿತವಾಗಿ ಟೀ ಶರ್ಟ್ ಮತ್ತು ಕ್ಯಾಪ್​ಗಳನ್ನು ನೀಡಲಾಯಿತು. ಲಕ್ಕಿ ಡ್ರಾನಲ್ಲಿ ಪಡೆದ ಬಹುಮಾನ ಸೈಕಲ್ ಅನ್ನು ಬೆಳಕೆ ಹೈಸ್ಕೂಲ್​ನ ವಿದ್ಯಾರ್ಥಿ ಸಂಜೀವ ನಾಯ್ಕಗೆ ವಿತರಿಸಲಾಯಿತು.

Summary
ಭಟ್ಕಳ : ವಾರದಲ್ಲಿ ಒಂದು ದಿನ ಸೈಕಲ್ ಓಡಿಸಿ !
Article Name
ಭಟ್ಕಳ : ವಾರದಲ್ಲಿ ಒಂದು ದಿನ ಸೈಕಲ್ ಓಡಿಸಿ !
Description
ಪರಿಸ್ಥಿತಿ ಹೀಗೆಯೆ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆ ಅಪಯಕಾರಿ ಸನ್ನಿವೇಶ ಅನುಭವಿಸಬೇಕಾಗುತ್ತದೆ. ಇಂದು ಒಂದು ದಿನ ಮಾತ್ರವಲ್ಲ ಕನಿಷ್ಠ ವಾರದಲ್ಲಿ 1 ದಿನವಾದರೂ ಸೈಕಲ್ ಬಳಸಲು ರೂಢಿ ಮಾಡಿಕೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here