ಶಿಡ್ಲಘಟ್ಟ: ಚುನಾವಣೆಗಳಲ್ಲಿ ಮತಕ್ಕಾಗಿ ಹಣ ನೀಡುವುದು ತಪ್ಪು, ಹಣ ಪಡೆಯುವುದೂ ತಪ್ಪು. ಆದರೂ ಅಂತಹ ಅನಿವಾರ್ಯ ಸ್ಥಿತಿಯನ್ನು ಎಲ್ಲರೂ ಸೇರಿ ನಿರ್ಮಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಒಂದಲ್ಲ ಒಂದು ದಿನ ನಮ್ಮೆಲ್ಲರನ್ನು ಸಮಸ್ಯೆಗೆ ತಳ್ಳುತ್ತದೆ ಎಂದು ಶಾಸಕ ವಿ.ಮುನಿಯಪ್ಪ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಮಳ್ಳೂರು ಗ್ರಾಮದ ನಾಗಲದೇವಿ ಸಮುದಾಯ ಭವನದಲ್ಲಿ ನಡೆದ ಎಸ್‌ಎಫ್‌ಸಿಎಸ್‌ ಬ್ಯಾಂಕ್‌ ವ್ಯಾಪ್ತಿಯ ಮಹಿಳಾ ಸ್ವ ಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಿಸುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಯಾವುದೇ ಹಂತದ ಚುನಾವಣೆಗಳು ಎಂದರೂ ಸಾಕು ಭಯ ಪಡುವ ವಾತಾವರಣ ನಿರ್ಮಾಣ ಆಗಿದೆ. ಸ್ವಂತ ದುಡಿಮೆಯ ಹಣದಿಂದ ಚುನಾವಣೆಯನ್ನು ಎದುರಿಸಬಹುದು ಎನ್ನುವ ನಂಬಿಕೆಯೂ ಇಲ್ಲ, ಧೈರ್ಯವೂ ಇಲ್ಲದಾಗಿದೆ ಎಂದರು.

ಯಾರೋ ಭೂಗಳ್ಳರು ಎಲ್ಲಿಂದಲೋ ಬಂದು ಯಾವುದೋ ಭೂಮಿಯನ್ನು ಲಪಟಾಯಿಸಿ ಮಾರಾಟ ಮಾಡಿ ಅದರಿಂದ ಬರುವ ಕೋಟಿ ಕೋಟಿ ಹಣದಿಂದ ಮಾತ್ರವೇ ಚುನಾವಣೆಯನ್ನು ಎದುರಿಸುವಂತಾಗಿದೆ. ಅದು ನಮ್ಮಂತಹವರಿಂದ ಸಾಧ್ಯವಿಲ್ಲ. ಇದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ದಿನ ನಮ್ಮೆಲ್ಲರನ್ನೂ ಇನ್ನಿಲ್ಲದ ಸಂಕಷ್ಟಕ್ಕೆ ತಳ್ಳುತ್ತದೆ. ಅದರ ಪ್ರತಿಫಲವನ್ನು ಅನುಭವಿಸಲೇಬೇಕಾಗುತ್ತದೆ ಎಂದು ಹೇಳಿದರು.

ಮಹಿಳೆಯರಿಂದ ಸಾಧ್ಯ: ಕನಿಷ್ಟ ಮಹಿಳೆಯರಾದರೂ ತಮ್ಮಲ್ಲಿ ಬದಲಾವಣೆ ತಂದುಕೊಂಡರೆ ಅದು ಇತರರ ಬದಲಾವಣೆಗೂ ಕಾರಣ ಆಗಬಹುದು. ಅಂತಹ ಒಂದು ಪ್ರಯತ್ನ ನಿಮ್ಮಿಂದ ಆಗಲಿ, ಅದು ಸಮಾಜದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಗೆ ಮೂಲ ಆಗಲಿ ಎಂದು ಆಶಿಸಿದರು.

ರಾಜಕೀಯದಲ್ಲಿ ಮಹಿಳಾ ಮೀಸಲು: ಕಾಂಗ್ರೆಸ್‌ ಪಕ್ಷ ವೂ ಎಲ್ಲ ಜಾತಿ ಸಮುದಾಯಕ್ಕೂ ಸಾಮಾಜಿಕ ನ್ಯಾಯವನ್ನು ಒದಗಿಸಿದಂತೆ, ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲು ಸಮಾನತೆ ನೀಡಿದ್ದು ಕೂಡ ನಮ್ಮದೇ ಕಾಂಗ್ರೆಸ್‌ ಪಕ್ಷ ಎಂದರು.

ಮೀಸಲಿಗೂ ಮುನ್ನ ಕೇವಲ ಉನ್ನತ ವರ್ಗದವರಷ್ಟೇ ಅದರಲ್ಲೂ ಪುರುಷರು ಮಾತ್ರವೇ ಅಧಿಕಾರದಲ್ಲಿ ಕೂರುತ್ತಿದ್ದರು. ಆದರೆ ಮಹಿಳೆಯರಿಗೆ ಮೀಸಲು ತಂದ ಮೇಲೆ ಅರ್ಧಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಚುಕ್ಕಾಣಿಯನ್ನು ಮಹಿಳೆಯರು ಹಿಡಿಯುವಂತಾಗಿದೆ. ಅದರಲ್ಲೂ ಪರಿಶಿಷ್ಟ ಜಾತಿ, ಪಂಗಡ ಹಿಂದುಳಿದ ವರ್ಗದ ಎಲ್ಲ ಮಹಿಳೆಯರೂ ಕೂಡ ಅಧಿಕಾರ ಹಿಡಿದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೇಲಕ್ಕೆತ್ತುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಮಹಿಳೆಯರಿಗೂ ಸುಮಾರು 300ರಿಂದ 350 ಕೋಟಿ ರೂ. ಸಾಲ ಸೌಲಭ್ಯವನ್ನು ನೀಡಲಾಗುವುದು ಎಂದರು.

ಸಾಕಷ್ಟು ಬಡ ಮಹಿಳೆಯರು ತಮ್ಮ ನಿತ್ಯದ ಬದುಕಿಗಾಗಿ ಲೇವಾದಾರರಿಂದ ಮೀಟರ್‌ ಬಡ್ಡಿಗೆ ಹಣ ಪಡೆದು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಲು ಎಲ್ಲ ಮಹಿಳೆಯರಿಗೂ ಬಡ್ಡಿರಹಿತ ಸಾಲ ನೀಡಲಾಗುವುದು ಎಂದರು.

16 ಸಂಘಗಳಿಗೆ 55 ಲಕ್ಷ ರೂ. ಸಾಲ ವಿತರಿಸಲಾಯಿತು. ಎಸ್‌ಎಫ್‌ಸಿಎಸ್‌ನ ಕಾರ್ಯದರ್ಶಿಯಾಗಿ 40 ವರ್ಷಗಳ ಕಾರ್ಯನಿರ್ವಹಿಸಿ ನಿವೃತ್ತರಾದ ಶ್ರೀರಾಮಯ್ಯ, ಶಾಸಕ ವಿ.ಮುನಿಯಪ್ಪ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ , ಉಪಾಧ್ಯಕ್ಷ ರನ್ನು ಮಳ್ಳೂರು ಎಸ್‌ಎಫ್‌ಸಿಎಸ್‌ ಬ್ಯಾಂಕಿನ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಡಾಲ್ಫಿನ್‌ ನಾಗರಾಜ್‌, ಮಳ್ಳೂರು ಎಸ್‌ಎಫ್‌ಸಿಎಸ್‌ ಬ್ಯಾಂಕ್‌ ಅಧ್ಯಕ್ಷ ಜಿ.ಎಂ.ರಾಮರೆಡ್ಡಿ, ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಹಾಪ್‌ಕಾಮ್ಸ್‌ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಎಪಿಎಂಸಿ ನಿರ್ದೇಶಕ ಮೇಲೂರು ಮುರಳಿ, ಬ್ಯಾಂಕ್‌ನ ಉಪಾಧ್ಯಕ್ಷ ಸಿ.ನಾರಾಯಣಸ್ವಾಮಿ, ನಿರ್ದೇಶಕರಾದ ಎಂ.ಆರ್‌.ಮುನಿಕೃಷ್ಣಪ್ಪ, ಎಸ್‌.ನಾರಾಯಣಸ್ವಾಮಿ, ಕೆ.ಮುನಿರಾಜು, ಶಾಂತಮ್ಮ, ಆರ್‌.ವಾಣಿ, ಪದ್ಮಾ, ಸಂಜೀವಮ್ಮ, ವ್ಯವಸ್ಥಾಪಕ ಆನಂದ್‌, ಸಿಇಒ ಎಂ.ಎಸ್‌.ಮಂಜುನಾಥ್‌ ಇನ್ನಿತರರು ಹಾಜರಿದ್ದರು.

Summary
ಭೂಗಳ್ಳರಿಂದಷ್ಟೇ ಚುನಾವಣೆ ಎದುರಿಸುವ ಸ್ಥಿತಿ!!
Article Name
ಭೂಗಳ್ಳರಿಂದಷ್ಟೇ ಚುನಾವಣೆ ಎದುರಿಸುವ ಸ್ಥಿತಿ!!
Description
ಸಾಕಷ್ಟು ಬಡ ಮಹಿಳೆಯರು ತಮ್ಮ ನಿತ್ಯದ ಬದುಕಿಗಾಗಿ ಲೇವಾದಾರರಿಂದ ಮೀಟರ್‌ ಬಡ್ಡಿಗೆ ಹಣ ಪಡೆದು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಲು ಎಲ್ಲ ಮಹಿಳೆಯರಿಗೂ ಬಡ್ಡಿರಹಿತ ಸಾಲ ನೀಡಲಾಗುವುದು ಎಂದರು.  16 ಸಂಘಗಳಿಗೆ 55 ಲಕ್ಷ ರೂ. ಸಾಲ ವಿತರಿಸಲಾಯಿತು. ಎಸ್‌ಎಫ್‌ಸಿಎಸ್‌ನ ಕಾರ್ಯದರ್ಶಿಯಾಗಿ 40 ವರ್ಷಗಳ ಕಾರ್ಯನಿರ್ವಹಿಸಿ ನಿವೃತ್ತರಾದ ಶ್ರೀರಾಮಯ್ಯ, ಶಾಸಕ ವಿ.ಮುನಿಯಪ್ಪ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ , ಉಪಾಧ್ಯಕ್ಷ ರನ್ನು ಮಳ್ಳೂರು ಎಸ್‌ಎಫ್‌ಸಿಎಸ್‌ ಬ್ಯಾಂಕಿನ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಡಾಲ್ಫಿನ್‌ ನಾಗರಾಜ್‌, ಮಳ್ಳೂರು ಎಸ್‌ಎಫ್‌ಸಿಎಸ್‌ ಬ್ಯಾಂಕ್‌ ಅಧ್ಯಕ್ಷ ಜಿ.ಎಂ.ರಾಮರೆಡ್ಡಿ, ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಹಾಪ್‌ಕಾಮ್ಸ್‌ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಎಪಿಎಂಸಿ ನಿರ್ದೇಶಕ ಮೇಲೂರು ಮುರಳಿ, ಬ್ಯಾಂಕ್‌ನ ಉಪಾಧ್ಯಕ್ಷ ಸಿ.ನಾರಾಯಣಸ್ವಾಮಿ, ನಿರ್ದೇಶಕರಾದ ಎಂ.ಆರ್‌.ಮುನಿಕೃಷ್ಣಪ್ಪ, ಎಸ್‌.ನಾರಾಯಣಸ್ವಾಮಿ, ಕೆ.ಮುನಿರಾಜು, ಶಾಂತಮ್ಮ, ಆರ್‌.ವಾಣಿ, ಪದ್ಮಾ, ಸಂಜೀವಮ್ಮ, ವ್ಯವಸ್ಥಾಪಕ ಆನಂದ್‌, ಸಿಇಒ ಎಂ.ಎಸ್‌.ಮಂಜುನಾಥ್‌ ಇನ್ನಿತರರು ಹಾಜರಿದ್ದರು. 

LEAVE A REPLY

Please enter your comment!
Please enter your name here