ಮಂಗಳೂರಲ್ಲಿ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಯೊಂದು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು.ಮಂಗಳೂರಿನ ಕೊಟ್ಟಾರದಲ್ಲಿರೋ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಬಿಗಿ ಭದ್ರತೆ ಮಧ್ಯೆ ಟಿಪ್ಪು ಜಯಂತಿ ಆಚರಣೆಗೆ ಚಾಲನೆ ನೀಡಲಾಯಿತು. ಈ ಮುಂಚೆ ಬಿಜೆಪಿ ಪಕ್ಷದ ಕ್ರೈಸ್ತ ಮುಖಂಡ
ಫ್ರಾಂಕ್ಲಿನ್ ಮೊಂತೆರೋ ಎಂಬುವವರು ಅಂಗಿ ತೆಗೆದು ಪ್ರತಿಭಟನೆ ನಡೆಸಲು ಮುಂದಾದ್ರು. ಅಲ್ದೇ ಕಪ್ಪು ಬಾವುಟ ತೋರಿಸಿ ಟಿಪ್ಪುಜಯಂತಿಗೆ, ಸಿದ್ಧರಾಮಯ್ಯ,‌ ಪರಮೇಶ್ವರ್‌ಗೆ ಧಿಕ್ಕಾರ ಕೂಗಿ ಸಭಾಂಗಣ ಪ್ರವೇಶಕ್ಕೆ ಹೋಗಲು ಅಣಿಯಾಗುತ್ತಿದ್ದಂತೆ ಪೊಲೀಸರು ತಡೆಹಿಡಿದು ಪೊಲೀಸ್ ವಾಹನದಲ್ಲಿ ಹಾಕಿ ಕೊಂಡೊಯ್ದರು. ಇದಾದ ನಂತರ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಆಚರಣೆ ನಡೆಯುತ್ತಿರುವ ಸಭಾಂಗಣಕ್ಕೆ ನುಗ್ಗಲು ಯತ್ನಿಸಿದರು. ಅಲ್ದೇ
ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದುಕೊಂಡರು.

LEAVE A REPLY

Please enter your comment!
Please enter your name here