ಮಂಡ್ಯ: ನಿರ್ಮಾಣ ಹಂತದ ಲಿಫ್ಟ್ ಕೋಣೆ ಅನ್ನು ಶೌಚಾಲಯ ಎಂದು ತಿಳಿದು, ಒಳಗೆ ಕಾಲು ಹಾಕಿದ ಮಹಿಳೆ ಕೆಳಗೆ ಬಿದ್ದು ಸಾವಿಗೀಡಾದ ದಾರುಣ ಘಟನೆ ಪಾಂಡವಪುರ ಸರ್ಕಾರಿ‌ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಪಾಂಡವಪುರ ತಾಲ್ಲೂಕಿನ ಎಣ್ಣೆಹೊಳೆ ಕೊಪ್ಪಲಿನ ಶಾರದಮ್ಮ(62) ಮೃತರು. ಕಾಮಗಾರಿ ನಡೆಯುತ್ತಿದ್ದ ಲಿಫ್ಟ್ ರೂಂಗೆ ಬಾಗಿಲು ಅಳವಡಿಸದೆ ಇದ್ದಿದ್ದರಿಂದ ಈ ಘಟನೆ ನಡೆದಿದೆ.

ಕತ್ತಲೆಯಲ್ಲಿ ಶೌಚಾಲಯದ ಕೊಠಡಿ ಎಂದು ಲಿಫ್ಟ್ ಕೋಣೆಗೆ ಮಹಿಳೆ ಹೋಗಿದ್ದಾರೆ. ಈ ವೇಳೆ ಈ ದುರ್ಘಟನೆ ನಡೆದಿದೆ.

ಮೊಮ್ಮಗಳೊಂದಿಗೆ ಡಯಾಲಿಸಿಸ್ಗೆ ನೆರವಾಗಲು ಈ ಮಹಿಳೆ ಬಂದಿದ್ದರು ಎನ್ನಲಾಗಿದೆ. ಘಟನೆಯಿಂದಾಗಿ ಕೆಲಕಾಲ ಆಸ್ಪತ್ರೆ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Summary
ಮಂಡ್ಯ : ನಿರ್ಮಾಣ ಹಂತದ ಲಿಫ್ಟ್‌ನೇ ಶೌಚಾಲಯ ಎಂದು ಒಳಗೆ ಕಾಲಿಟ್ಟ ಮಹಿಳೆ ಸಾವು!
Article Name
ಮಂಡ್ಯ : ನಿರ್ಮಾಣ ಹಂತದ ಲಿಫ್ಟ್‌ನೇ ಶೌಚಾಲಯ ಎಂದು ಒಳಗೆ ಕಾಲಿಟ್ಟ ಮಹಿಳೆ ಸಾವು!
Description
ಪಾಂಡವಪುರ ತಾಲ್ಲೂಕಿನ ಎಣ್ಣೆಹೊಳೆ ಕೊಪ್ಪಲಿನ ಶಾರದಮ್ಮ(62) ಮೃತರು. ಕಾಮಗಾರಿ ನಡೆಯುತ್ತಿದ್ದ ಲಿಫ್ಟ್ ರೂಂಗೆ ಬಾಗಿಲು ಅಳವಡಿಸದೆ ಇದ್ದಿದ್ದರಿಂದ ಈ ಘಟನೆ ನಡೆದಿದೆ. 

LEAVE A REPLY

Please enter your comment!
Please enter your name here