ಬೆಂಗಳೂರು: ಮಂಡ್ಯ ಲೋಕ್ಸಭೆ ಕಣದಲ್ಲಿ ಮುಖ್ಯಮಂತ್ರಿ ಎಚ್.ಡಿ.. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾತ್ರಸ್ವಾಮಿ ಸ್ಪರ್ಧಿಸುತ್ತಿರುವುದು ಖಚಿತವಾಗುತ್ತಿದ್ದಂತೆ ನಿಖಿಲ್ ಅಭಿನಯಿಸಿರುವ ನಾಗಣ್ಣ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರ “ಕುರುಕ್ಷೇತ್ರ” ಬಿಡುಗಡೆ ಮತ್ತೆ ವಿಳಂಬವಾಗುತ್ತದೆಂಬ ಮಾತು ಕೇಳಿಬರುತ್ತಿದೆ.
ನಿಖಿಲ್ ಕುಮಾರಸ್ವಾಮಿ ಇದಾಗಲೇ “ಜಾಗ್ವಾರ್”, “ಸೀತಾರಾಮ ಕಲ್ಯಾಣ” ಚಿತ್ರಗಳಲ್ಲಿ ನಟಿಸಿದ್ದು “ಕುರುಕ್ಷೇತ್ರ” ಅವರ ಮೂರನೇ ಚಿತ್ರವಾಗಿದೆ. ಮುನಿರತ್ನ ನಿರ್ಮಾಣ, ನಾಗಣ್ಣ ಆಕ್ಷನ್ ಕಟ್ ಹೇಳಿದ ಈ ಚಿತ್ರದಲ್ಲಿ ನಿಖಿಲ್ ಅಭಿಮನ್ಯುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಇದರಲ್ಲಿ ಅಭಿನಯಿಒಸುತ್ತಿದ್ದಾರೆ.

ಚಿತ್ರದ ಗ್ರಾಫಿಕ್ಸ್ ಕೆಲಸ ಪ್ರಗತಿಯಲ್ಲಿದೆ. ಕೆಲ ಹಂತಗಳಲ್ಲಿ ಗ್ರಾಫಿಕ್ಸ್ ಕೆಲಸ ವಿಳಂಬವಾಗಿರುವುದು ಚಿತ್ರ ಬಿಡುಗಡೆ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ ಇದೀಗ ಲೋಕಸಭೆ ಚುನಾವಣೆಗೆ ನಿಖಿಲ್ ಸ್ಪರ್ಧಿಸುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿನಯದ ಚಿತ್ರ ಬಿಡುಗಡೆ ಇನ್ನಷ್ಟು ವಿಳಂಬ ಆಗಲಿದೆ ಎಂದೂ ಹೇಳಆಗುತ್ತಿದೆ. ಒಂದು ವೇಳೆ ನೀತಿ ಸಂಹಿತೆ ಜಾರಿಯಾದದ್ದೇ ಆದರೆ ಬಹುನಿರೀಕ್ಷಿತ ಚಿತ್ರ “ಕುರುಕ್ಷೇತ್ರ” ಲೋಕಸಭೆ ಚುನಾವಣೆ ಮುಗಿದ ಬಳಿಕವೇ ತೆರೆ ಕಾಣಬೇಕಾಗುವ ಸಂಭವವೂ ಇದೆ ಎನ್ನಲಾಗಿದೆ.
ಆದರೆ ಈ ಸಂಬಂಧ ಚಿತ್ರತಂಡ, ನಿರ್ಮಾಪಕರಾಗಲಿ ಇದುವರೆಗೆ ಅಧಿಕೃತ ಹೇಳಿಕೆನೀಡಿಲ್ಲ

LEAVE A REPLY

Please enter your comment!
Please enter your name here