ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟಿಯೆಂದರೆ ‘ಡಿಂಪಲ್​ ಕ್ವೀನ್’ ರಚಿತಾರಾಮ್. ಸೀತಾರಾಮ ಕಲ್ಯಾಣ, ನಟಸಾರ್ವಭೌಮ ಸೇರಿದಂತೆ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ‘ಐಲವ್​ಯೂ’ ಸಿನಿಮಾದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ಲಂಗ ದಾವಣಿ ತೊಟ್ಟು ಥೇಟ್​ ಹಳ್ಳಿ ಹುಡುಗಿಯಾಗಿ ಸಿನಿರಸಿಕರ ಮನ ಗೆದ್ದಿದ್ದರು. ಈ ಗ್ಯಾಪ್​ನಲ್ಲೇ ಉಪ್ಪಿ ಜೊತೆಗೆ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ರು. ಇದೀಗ ಮಲೇಷ್ಯಾದಲ್ಲಿ ‘ಐ ಲವ್​ ಯೂ’ ಹೇಳೋಕೆ ಹೊರಟಿರೋ ರಚ್ಚು, ಟ್ರೈ ಸೈಕಲ್​ ಏರಿ ಮಲೇಷ್ಯಾ ರಸ್ತೆಗಳನ್ನು ಸುತ್ತುತ್ತಿದ್ದಾರೆ.
‘ಒಂದಾನೊಂದು ಕಾಲದ’ ಹಾಡು..!
ಉಪೇಂದ್ರ – ಆರ್.ಚಂದ್ರು ಕಾಂಬಿನೇಷನ್​ನಲ್ಲಿ ನಿರ್ಮಾಣವಾಗುತ್ತಿರೋ ‘ಐ ಲವ್​ ಯೂ’ ಸಿನಿಮಾದ ಶೂಟಿಂಗ್​ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಮೊನ್ನೆಯಷ್ಟೇ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್ ಸಮಾರಂಭ ನಡೆಯಿತು. ಇದೀಗ ‘ಒಂದಾನೊಂದು ಕಾಲದಿಂದ’ ಅನ್ನೋ ರೋಮ್ಯಾಂಟಿಕ್ ಹಾಡನ್ನು ಮಲೇಷ್ಯಾದಲ್ಲಿ ಶೂಟ್ ಮಾಡಲಾಗ್ತಿದೆ. ನಗರದ ಗಲ್ಲಿಯೊಂದರಲ್ಲಿ ಟ್ರೈ ಸೈಕಲ್ ಹತ್ತಿ ಬ್ಯುಸಿ ಶೆಡ್ಯೂಲ್​ ನಡುವೆಯೂ ಚಿತ್ರೀಕರಣವನ್ನು ಎಂಜಾಯ್ ಮಾಡ್ತಿದ್ದಾರೆ.

Summary
ಮಲೇಷ್ಯಾದಲ್ಲಿ ರಚಿತಾ ಆಟ- ಬೊಂಬಾಟ..! ಟ್ರೈ ಸೈಕಲ್​ ಹತ್ತಿದ ರಚ್ಚು..!
Article Name
ಮಲೇಷ್ಯಾದಲ್ಲಿ ರಚಿತಾ ಆಟ- ಬೊಂಬಾಟ..! ಟ್ರೈ ಸೈಕಲ್​ ಹತ್ತಿದ ರಚ್ಚು..!

LEAVE A REPLY

Please enter your comment!
Please enter your name here