ವಿಜಯಪುರ

ನೀಲಮ್ಮ ಮೇಟಿ ಬೆಂಗಳೂರಿನಲ್ಲಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ‌ ಬೆನ್ನಲ್ಲೇ ಇತ್ತ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಬುಧವಾರ ತಡರಾತ್ರಿ ಕನಕದಾಸ ಬಡಾವಣೆಯಲ್ಲಿರುವ‌ ಅವರ ನಿವಾಸದಲ್ಲಿ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮನೆ ಬೀಗ ಮುರಿದು ರೂ.4 ಲಕ್ಷ ನಗದು, ಸುಮಾರು 300 ಗ್ರಾಂ ಚಿನ್ನಾಭರಣ, ಫಾರ್ಚುನರ್ ವಾಹನ ಕಳವು ಮಾಡಿದ್ದಾರೆ.

ಕಳೆದ ಬುಧವಾರವಷ್ಟೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬೆಂಗಳೂರಿಗೆ ತೆರಳಿದ್ದರು ಮೇಟಿ ದಂಪತಿ. ನಸುಕಿನ ಜಾವ ಮರಳುವ ವೇಳೆ ಕಳ್ಳತನ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಜಲನಗರ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here