ಹಾಸನ

ಡಿಸೆಂಬರ್ 6: ಯಾರು ಮಾಟ-ಮಂತ್ರ ಮಾಡಿಸಿದರೂ ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎಂದು ಸಚಿವ ಎಚ್‌ಡಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ ಯಡಿಯೂರಪ್ಪ ಅಲ್ಲ ಯಾರು ಮಾಟ, ಮಂತ್ರ ಮಾಡಿಸಿದರೂ ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ, ನಮ್ಮ ಸರ್ಕಾರ ಸುಭದ್ರವಾಗಿ 5 ವರ್ಷ ಪೂರೈಸುತ್ತದೆ. ಪ್ರತಿಪಕ್ಷದವರು ಏನೇ ಆರೋಪ ಮಾಡಲಿ ಎಂದು ಹೇಳಿದರು.

ಎಂದಿಗೂ ಮುಖ್ಯಮಂತ್ರಿಯಾಗುವ ಆಸೆಯನ್ನು ನಾನು ಇಟ್ಟುಕೊಂಡಿಲ್ಲ, ಮುಖ್ಯಮಂತ್ರಿ ಹುದ್ದೆಗಾಗಿ ನಾನು,ಕುಮಾರಸ್ವಾಮಿ ಯಾವತ್ತೂ ಜಗಳವಾಡಿಲ್ಲ, ಮುಂದೆ ಆಡುವುದೂ ಇಲ್ಲ, ನಮ್ಮ ಕುಟುಂಬದ ಮೇಲೆ ಶಾರದೆಯ ಅನುಗ್ರಹವಿದೆ ಎಂದರು.

ನಾನು ಎಲ್ಲಾ ವಿಚಾರದಲ್ಲಿ ತಲೆ ಹಾಕಿದ್ದೆ ಎಂದಾದರೆ ಸಮನ್ವಯ ಸಮಿತಿ ಸಭೆಯಲ್ಲಿ ಅದನ್ನು ಚರ್ಚಿಸುತ್ತಿದ್ದರು, ಸಿದ್ದರಾಮಯ್ಯ, ಪರಮೇಶ್ವರ್​ ಎಲ್ಲರೂ ಕರೆದು ಮಾತನಾಡಬಹುದಿತ್ತು. ಆದರೆ ಯಾರೂ ಆ ಕೆಲಸ ಮಾಡಿಲ್ಲ , ನನ್ನ ಮೇಲಿನ ಆರೋಪವೆಲ್ಲ ಸುಳ್ಳು ಎಂದು ಹೇಳಿದರು.

:

LEAVE A REPLY

Please enter your comment!
Please enter your name here