ಬೆಂಗಳೂರು: ಚಂದಿರನ ಅಂಗಳಕ್ಕೆ ತಲುಪುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯು ಈ ವರ್ಷದ ಮಾರ್ಚ್ 25 ರಿಂದ ಏಪ್ರಿಲ್ ಅಂತ್ಯದ ಒಳಗೆ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ಚಂದ್ರಯಾನ-2 ಉಡಾವಣೆಯನ್ನು ಜನವರಿಯಿಂದ ಫೆಬ್ರುವರಿ ಅವಧಿಯಲ್ಲಿ ನಡೆಸಲು ಗುರಿ ಹೊಂದಲಾಗಿತ್ತು. ಆದರೆಮ ಕೆಲವು ಪರೀಕ್ಷೆಗಳು ಪೂರ್ಣಗೊಳ್ಳದ ಕಾರಣ ಮುಂದೂಡಲಾಗಿದೆ ಎಂದಯ ಹೇಳಿದ್ದಾರೆ.

ಚಂದ್ರನ ದಕ್ಷಿಣ ಧ್ರುವದ ಸಮೀಪ ತೆರಳುವ ಜಗತ್ತಿನ ಮೊದಲ ಯೋಜನೆ ಇದಾಗಿದೆ.

ಕಳೆದ ವರ್ಷ ಇಸ್ರೋ 17 ಯೋಜನೆಗಳ ಪೈಕಿ 16ಅನ್ನು ಯಶಸ್ವಿಯಾಗಿ ನಿಭಾಯಿಸಿದೆ. ಅತ್ಯಂತ ತೂಕದ ಜಿಸ್ಯಾಟ್ 29 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. 154ರಲ್ಲಿ 94 ಪ್ರಮುಖ ಯೋಜನೆಗಳು ಪೂರ್ಣಗೊಂಡಿವೆ. ಒಟ್ಟು 30 ಸಾವಿರ ಕೋಟಿ ರೂ ಇಸ್ರೋ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ಹತ್ತು ಸಾವಿರ ಕೋಟಿ ರೂ.ಅನ್ನು ಗಗನಯಾನ ಯೋಜನೆಗೆ ಮೀಸಲಿಡಲಾಗಿದೆ ಎಂದಿದ್ದಾರೆ.

ಮುಂದಿನ ಎರಡು ವರ್ಷ ಹಣ ವಿನಿಯೋಗ ಮಾಡಿದರೆ ನಾವು ಈ ಕ್ಷೇತ್ರದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿ ಮಾಡಬಹುದು ಎಂದು ತಿಳಿಸಿದ್ದಾರೆ.

ಇಸ್ರೋ ಟಿವಿಯ ಪ್ರಾಥಮಿಕ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಈ ಟಿವಿಯನ್ನು ಪ್ರಸಕ್ತ ವರ್ಷವೇ ಆರಂಭಿಸುವ ಯೋಜನೆ ನಡೆಸಲಾಗಿದೆ ಎಂದಿದ್ದಾರೆ.

Summary
ಮಾರ್ಚ್ 25 ರಿಂದ ಏಪ್ರಿಲ್ ಅಂತ್ಯದ ಒಳಗೆ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
Article Name
ಮಾರ್ಚ್ 25 ರಿಂದ ಏಪ್ರಿಲ್ ಅಂತ್ಯದ ಒಳಗೆ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
Description
ಕಳೆದ ವರ್ಷ ಇಸ್ರೋ 17 ಯೋಜನೆಗಳ ಪೈಕಿ 16ಅನ್ನು ಯಶಸ್ವಿಯಾಗಿ ನಿಭಾಯಿಸಿದೆ. ಅತ್ಯಂತ ತೂಕದ ಜಿಸ್ಯಾಟ್ 29 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. 154ರಲ್ಲಿ 94 ಪ್ರಮುಖ ಯೋಜನೆಗಳು ಪೂರ್ಣಗೊಂಡಿವೆ. ಒಟ್ಟು 30 ಸಾವಿರ ಕೋಟಿ ರೂ ಇಸ್ರೋ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ಹತ್ತು ಸಾವಿರ ಕೋಟಿ ರೂ.ಅನ್ನು ಗಗನಯಾನ ಯೋಜನೆಗೆ ಮೀಸಲಿಡಲಾಗಿದೆ ಎಂದಿದ್ದಾರೆ. ಮುಂದಿನ ಎರಡು ವರ್ಷ ಹಣ ವಿನಿಯೋಗ ಮಾಡಿದರೆ ನಾವು ಈ ಕ್ಷೇತ್ರದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿ ಮಾಡಬಹುದು ಎಂದು ತಿಳಿಸಿದ್ದಾರೆ. ಇಸ್ರೋ ಟಿವಿಯ ಪ್ರಾಥಮಿಕ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಈ ಟಿವಿಯನ್ನು ಪ್ರಸಕ್ತ ವರ್ಷವೇ ಆರಂಭಿಸುವ ಯೋಜನೆ ನಡೆಸಲಾಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here