ಗೌರಿ ಲಂಕೇಶ್​ ಹತ್ಯೆ ವಿಚಾರವನ್ನು ಯಾವುದೇ ಸಿನಿಮಾದಲ್ಲಿ ಬಳಸಿಕೊಳ್ಳಬಾರದು ಅಂತಾ ಕವಿತಾ ಲಂಕೇಶ್​ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ. ‘ಮಿ. ನಟ್ವರ್​ಲಾಲ್​’ ಎಂಬ ಸಿನಿಮಾದಲ್ಲಿ ಗೌರಿ ಹತ್ಯೆಯ ಕಥೆಯಿದೆ ಎಂಬಂತಹ ಸುದ್ದಿ ಹರಿದಾಡಿತ್ತು. ಈ ಸುದ್ದಿಯಿಂದ ಎಚ್ಚೆತ್ತ ಕವಿತಾ ತಮ್ಮ ಸಹೋದರಿಯ ಹತ್ಯೆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಆದ್ದರಿಂದ ಯಾವುದೇ ಸಿನಿಮಾದಲ್ಲೂ ಗೌರಿ ಕುರಿತಾದ ಸನ್ನಿವೇಶಗಳನ್ನು ಬಳಸಬಾರದು ಅಂತಾ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಗೌರಿ ಲಂಕೇಶ್​ ಹತ್ಯೆ ವಿಚಾರ ದೇಶಾದ್ಯಂತ ದೊಡ್ಡ ಸಂಚಲನ ಎಬ್ಬಿಸಿತ್ತು. ಇಂದಿಗೂ ಗೌರಿ ಕೊಲೆ ಪ್ರಕರಣ ವಿಚಾರ ನ್ಯಾಯಾಲಯದಲ್ಲಿದೆ. ಈ ಸಂದರ್ಭದಲ್ಲಿ ಗೌರಿ ಹತ್ಯೆಯನ್ನೊಳಗೊಂಡ ‘ಮಿ.ನಟ್ವರ್​ಲಾಲ್​’ ಸಿನಿಮಾ ನಿರ್ಮಾಣವಾಗ್ತಿರೋದು ಕವಿತಾ ಲಂಕೇಶ್​ ಗಮನಕ್ಕೆ ಬಂದಿದೆ. ಈ ಸಿನಿಮಾದಲ್ಲಿ ‘ಕಾನ್​​ಸ್ಟೇಬಲ್​ ಸರೋಜ’ ಖ್ಯಾತಿಯ ತ್ರಿವೇಣಿ ನಟಿಸ್ತಿದ್ದು, ಗೌರಿ ಪಾತ್ರದಲ್ಲಿ ಅಭಿನಯಿಸ್ತಿದ್ದಾರೆ ಅಂತಾ ಸುದ್ದಿಯಾಗಿತ್ತು. ​ ಹೀಗಾಗಿ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದ್ದು, ಗೌರಿ ಹತ್ಯೆ ಸನ್ನಿವೇಶವನ್ನು ಬಳಸದಂತೆ ಸಿನಿಮಾದ ನಿರ್ದೇಶಕರಿಗೆ ಸೂಚನೆ ನೀಡುವಂತೆ ಕವಿತಾ ಲಂಕೇಶ್​ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಕವಿತಾ ಲಂಕೇಶ್​ ಆರೋಪವನ್ನು ‘ಮಿ.ನಟ್ವರ್​ಲಾಲ್​’ ಸಿನಿಮಾದ ನಿರ್ದೇಶಕ ಲವ ತಳ್ಳಿಹಾಕಿದ್ದಾರೆ. ‘ಸಿನಿಮಾದಲ್ಲಿ ಗೌರಿ ಹತ್ಯೆ ಕುರಿತಾದ ಯಾವುದೇ ಸನ್ನಿವೇಶಗಳಿಲ್ಲ. ನಾನು ಕೂಡ ಗೌರಿ ಲಂಕೇಶ್​ ಕುರಿತು ಓದಿಕೊಂಡಿದ್ದೇನೆ. ಅವರ ಮೇಲೆ ಅಪಾರವಾದ ಗೌರವವಿದೆ. ನಮ್ಮ ಸಿನಿಮಾಗೂ ಗೌರಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ’ ಅಂತಾ ನಿರ್ದೇಶಕ ಲವ ‘ಫಸ್ಟ್​ ನ್ಯೂಸ್​’ಗೆ ಪ್ರತಿಕ್ರಿಯಿಸಿದ್ದಾರೆ.

Summary
‘ಮಿ. ನಟ್ವರ್​ಲಾಲ್​’ 'ವಿರುದ್ಧ ಸಿಡಿದೆದ್ದ 'ಕವಿತಾ' ಲಂಕೇಶ್'​
Article Name
‘ಮಿ. ನಟ್ವರ್​ಲಾಲ್​’ 'ವಿರುದ್ಧ ಸಿಡಿದೆದ್ದ 'ಕವಿತಾ' ಲಂಕೇಶ್'​

LEAVE A REPLY

Please enter your comment!
Please enter your name here