ಮುಂಡರಗಿ : ಸಾಲ ಮಾಡಿ, ಜೀವನ ಪರ್ಯಂತ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗದೆ ಸರಳತೆಯಿಂದ ವಿವಾಹವಾಗಿ ಅದ್ದೂರಿತನಕ್ಕೆ ತೆರೆ ಎಳೆಯಬೇಕು ಇದರಿಂದ ಭವಿಷ್ಯದಲ್ಲಿ ಆರ್ಥಿಕ ಅನಕೂಲತೆ ಮಾಡಿಕೊಳ್ಳಲು ಸಹಾಯವಾಗುತ್ತದೆ, ಕಷ್ಟ ಪಟ್ಟು ನಿಷ್ಠೆಯಿಂದ ದುಡಿಯಿರಿ ಬಡತನ ತಾನಾಗಿಯೇ ಹೋಗುತ್ತದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ಇಲ್ಲಿಯ ಆರುಂಧತಿ ಟ್ರಸ್ಟ್‌ ಉದ್ಘಾಟನೆ ನಿಮಿತ್ತ ಹಮ್ಮಿಕೊಂಡ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಳ ವಿವಾಹವಾಗಲು ತಾವು ಸಚಿವರಾಗಿದ್ದಾಗ 50 ಸಾವಿರ ಪ್ರೋತ್ಸಾಹಧನ ನೀಡಿದ್ದೇನೆ. ಇಂತಹ ಅನುಕೂಲತೆ ಪಡೆದುಕೊಂಡು ಶ್ರಮ ವಹಿಸಿ ದುಡಿದು ಮನೆ ಕಟ್ಟಿ , ಜಮೀನು ಕೊಂಡುಕೊಂಡು, ತೋಟ ಮಾಡಿಕೊಂಡು ಸ್ವಾವಲಂಬನೆ ಜೀವನ ನಡೆಸಬೇಕು. ಇದಕ್ಕೆ ಶಿಕ್ಷ ಣ ಅವಶ್ಯ. ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಸಮಾಜಕ್ಕೆ ಶೇ.15 ರಷ್ಟು ಮೀಸಲಾತಿಯಲ್ಲಿ ಶೇ. 6 ರಷ್ಟು ಮೀಸಲು ಇನ್ನು ಸಿಕ್ಕಿಲ್ಲ, 30 ಸಾವಿರ ಕೋಟಿ ಎಸ್ಸಿ, ಎಸ್ಟಿಗೆ ಅನುದಾನ ನೀಡಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಸಮುದಾಯವನ್ನು ಕಡೆಗಣಿಸದೆ ಇತರ ಮೇಲ್ವರ್ಗದವರೂ ಕೂಡಾ ಮೀಸಲು ಅನ್ವಯ ರಾಜಕೀಯ, ಸಾಮಾಜಿಕ, ಶೈಕ್ಷ ಣಿವಾಗಿ ಮಾದಿಗ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡುವಂತಾಗಲಿ. ಸಂತೋಷದ ವಿಷಯ ಎಂದರೆ ಮೇಲ್ವರ್ಗದವರೂ ಹಿಂದುಳಿದ ದಲಿತರನ್ನು ಅಪ್ಪಿಕೊಳ್ಳುವ ಹೃದಯವಂತಿಕೆ ತೋರುತ್ತಿದ್ದಾರೆ ಎಂದರು.

ಚಿತ್ರದುರ್ಗ ಮಾದರ ಚನ್ನಯ್ಯ ಮಹಾಸ್ವಾಮಿಗಳು ಮಾತನಾಡಿ, ಹಿಂದೆ ಸಾಮೂಹಿಕ ವಿವಾಹ ಎಂದರೆ ಶೋಷಿತರ ವಿವಾಹ ಎಂಬ ಕೀಳರಿಮೆ ಇತ್ತು. ಈಚೆಗೆ ವಾಸ್ತವದ ಅರಿವು ಮೂಡಿ ಸಾಲ ಇನ್ನಿತರ ಹೊರೆ ತಪ್ಪಿಸಿಕೊಳ್ಳಲು ಸಾಮೂಹಿಕ ವಿವಾಹ ಪರಿಣಾಮಕಾರಿಯಾಗಿವೆ. ನವದಂಪತಿ ಮಿತ ಸಂಸಾರ ಹೊಂದಲಿ ಎಂದರು.

ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಎಲ್ಲ ಧರ್ಮಕ್ಕಿಂತ ಗೃಹಸ್ಥ ಧರ್ಮ ದೊಡ್ಡದು, ಹೆಣ್ಣನ್ನು ಭೋಗದ ವಸ್ತುವಾಗಿ, ಹೆರುವ ಯಂತ್ರ ಎಂದು ತಿಳಿಯದೆ ಸಹಧರ್ಮಿಣಿ, ತಾಯಿ, ಆರೈಕೆಯ ಕೈಗಳು ಎಂದು ಗೌರವ ನೀಡುವಂತಾಗಬೇಕು. ಸಂಸಾರ ಸಂಸ್ಕಾರಯುತವಾಗಿರಬೇಕು. ಹೀಗಾದಾಗ ಕುಟುಂಬ ಸಂಹಾರವಾಗುವುದಿಲ್ಲ, ಹೆತ್ತವರನ್ನು ಕೊನೆವರೆಗೆ ಜೋಪಾನ ಮಾಡಿ ತಮ್ಮ ಕರ್ತವ್ಯ ಪಾಲಿಸಬೇಕು. ವ್ಯಸನಮುಕ್ತ ಸಮಾಜ ನಿರ್ಮಿಸುವ ಹೊಣೆ ಯುವಕರ ಮೇಲಿದೆ. ಸಾಮೂಹಿಕ ವಿವಾಹ ಮಾಡಿದ ಮಾತ್ರಕ್ಕೆ ಉತ್ತಮ ಕೆಲಸ ಎನಿಸಿಕೊಳ್ಳುವದಿಲ್ಲ, ಜೀವನ ರೂಪಿಸುವ ಶಿಕ್ಷ ಣ, ಉತ್ತಮ ಮಾರ್ಗದರ್ಶನ ಯುವಕರಿಗೆ ಆಗಬೇಕು ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಡಾ.ಅಂಬೇಡ್ಕರ್‌ ನೀಡಿದ ಸಂವಿಧಾನದಿಂದಲೇ ಇಂದು ಸಮಾನತೆ ಪರಿಕಲ್ಪನೆ ಮೂಡಿದೆ. ಸಂವಿಧಾನ ಶೋಷಿತರಿಗೆ ಗಟ್ಟಿ ಧ್ವನಿ ನೀಡಿದೆ. ಹಕ್ಕಗಳನ್ನು ಎಲ್ಲ ಸಮುದಾಯದವರಿಗೆ ಕೊಟ್ಟ ಪರಿಣಾಮವೇ ಬದಲಾವಣೆ ಸಾಧ್ಯವಾಗಿದೆ ಎಂದರು. ಗೂಳಪ್ಪ ಹಲಗೇರಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಮಾತನಾಡಿದರು.

ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು, ನಿಂಗರಾಜ ಹಾಲಿನವರ, ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮು ಕಲಾಲ, ಮಾರುತಿ ಹೊಸಮನಿ, ಎಸ್‌.ಡಿ.ಮಕಾನದಾರ, ಕೊಟ್ರಗೌಡ ಪಾಟೀಲ, ಸಂತೋಷ ಹಿರೇಮನಿ, ಲಕ್ಷ ್ಮಣ ತಗಡಿನಮನಿ, ಶಿವು ಪೂಜಾರ, ಲಕ್ಷ ್ಮಣ ದೊಡ್ಡಮನಿ, ಪ್ರವೀಣ ವಡ್ಡಟ್ಟಿ, ನಿಂಗರಾಜ ಮೇಗಲಮನಿ, ಮೋಹನ ಹಿರೇಮನಿ, ಎಚ್‌.ಡಿ. ಪೂಜಾರ, ಡಿ.ಜಿ.ಪೂಜಾರ, ತಿಮ್ಮಣ್ಣ ಹರಿಜನ, ಲಕ್ಷ ್ಮಣ ಬೆಟಗೇರಿ, ಖಾಜಾಹುಸೇನ್‌ ಇತರರು ಪಾಲ್ಗೊಂಡಿದ್ದರು.ಸಂಜಯ ಚವಡಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತು ಮಾದರ ನಿರೂಪಿಸಿದರು.

ಸಂವಿಧಾನ ತಿರುಚಿದರೆ ಹೋರಾಟ : 

ಭಾರತ ಸಂವಿಧಾನವನ್ನು ಪ್ರಪಂಚವೇ ಮೆಚ್ಚಿಕೊಂಡಿದೆ. ಹೀಗಿರುವಾಗಲೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ. ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಕನ್ಯಾಕುಮಾರಿಯಿಂದ, ಕಾಶ್ಮೀರದವರೆಗೂ ಉಗ್ರ ಹೋರಾಟ ನಡೆಯುತ್ತದೆ ಎಂದು ಮಾಜಿ ಸಚಿವ ಆಂಜನೇಯ ಎಚ್ಚರಿಸಿದರು. ಯಾವ ದೇವರನ್ನೂ ಪೂಜಿಸಿಬೇಡಿ. ಬಸವಣ್ಣನವರನ್ನೇ ದೇವರು ಎಂದು ನಂಬಿ ಕಾಯಕ ಕಲಿಸಿದ ಮತ್ತು ಜಾತೀಯತೆ ಹೋಗಲಾಡಿಸಲು ಬಸವ ತತ್ವ ಒಂದೇ ಆಧಾರ ಎಂದು ಆಂಜನೇಯ ಹೇಳಿದರು.

Summary
ಮುಂಡರಗಿ : ಅದ್ದೂರಿಗೆ ತೆರೆ ಎಳೆಯಿರಿ !!
Article Name
ಮುಂಡರಗಿ : ಅದ್ದೂರಿಗೆ ತೆರೆ ಎಳೆಯಿರಿ !!
Description
ಯಾವ ದೇವರನ್ನೂ ಪೂಜಿಸಿಬೇಡಿ. ಬಸವಣ್ಣನವರನ್ನೇ ದೇವರು ಎಂದು ನಂಬಿ ಕಾಯಕ ಕಲಿಸಿದ ಮತ್ತು ಜಾತೀಯತೆ ಹೋಗಲಾಡಿಸಲು ಬಸವ ತತ್ವ ಒಂದೇ ಆಧಾರ ಎಂದು ಆಂಜನೇಯ ಹೇಳಿದರು.

LEAVE A REPLY

Please enter your comment!
Please enter your name here