ಮಂಡ್ಯ: ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ನಿಮಗೆ ಕಾಣುತ್ತಿದೆ. ಹಿಂದೆ ಹೆಜ್ಜೆ ಇಡಬೇಡಿ, ಮುಂದೆ ಇಡಿ‌ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ಅಂಬಿ ಪುತ್ರ ಅಭಿಷೇಕ್​ ಅಂಬರೀಷ್​ ಅಮ್ಮನ ಪರ ಚುನಾವಣಾ ಪ್ರಚಾರ ಕುರಿತು ತಿಳಿಸಿದರು.

ಬುಧವಾರ ಮಳ್ಳವಳ್ಳಿ ತಾಲೂಕಿನ ಹಾಡ್ಲಿ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್​, ಹೋದಲೆಲ್ಲಾ ಜನರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನನಗೆ ಪ್ರಚಾರವೇನು ಹೊಸದಲ್ಲ. ಹಿಂದೆ ಅಪ್ಪನ ಜತೆಯಲ್ಲಿಯೂ ಬಂದಿದ್ದೇನೆ. ಈ ಊರಿನಲ್ಲಿ ಅಪ್ಪನ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ನಮ್ಮ ತಾತ ಕೂಡ ಮಳವಳ್ಳಿಯವರು. ಅವರ ಆಶೀರ್ವಾದವೂ ಕೂಡ ಇದೆ ಎಂದು ಹೇಳಿದರು.

ನಮಗೆ ರಾಜಕೀಯ ಗೊತ್ತಿಲ್ಲ. ನಾವು ಏನೇ ತೀರ್ಮಾನ ಕೈಗೊಂಡರು ಅದನ್ನು ಜನರ ಮುಂದೆ ಇಟ್ಟು ತೀರ್ಮಾನ ಮಾಡುತ್ತೇವೆ. ನಮ್ಮ ತಂದೆ ಮತ್ತು ತಾಯಿಗೋಸ್ಕರ ಇಲ್ಲಿಗೆ ಬಂದಿದ್ದೇನೆ. ಇವರೆಲ್ಲ ನಮ್ಮ ಕೈ ಹಿಡಿಯುತ್ತಾರೆ ಎಂದು ತಿಳಿದುಕೊಂಡಿದ್ದೇನೆ. ಸ್ಯಾಂಡಲ್​ವುಡ್​ ನಟರು ಅಮ್ಮನ ಪರವಾಗಿ ಪ್ರಚಾರಕ್ಕೆ ಬಂದೆ ಬರುತ್ತಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here