ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟಕ್ಕೆ ವಿಶ್ವದ ಶ್ರೇಷ್ಠ ಆಟಗಾರರೆಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದು ಆಸ್ಟ್ರೇಲಿಯಾದ ಶೇನ್ ವಾರ್ನ್, ಸ್ಟೀವ್ ವ್ಹಾ ಅಂತಹ ಮಹಾನ್ ಆಟಗಾರರೆಲ್ಲರೂ ಕೊಹ್ಲಿ ಆಟವನ್ನು ನೋಟಿ ವಿಶ್ವ ಶ್ರೇಷ್ಠ ಆಟಗಾರ ಎಂದು ಹೇಳಿದ್ದು ಈ ಸಾಲಿಗೆ ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಕೂಡ ಸೇರಿಕೊಂಡಿದ್ದಾರೆ.
ಸಂಗಕ್ಕಾರ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಸ್ತುತ ಕೊಹ್ಲಿ ವಿಶ್ವ ಕ್ರಿಕೆಟ್ ನ ತಲೆ ಹಾಗೂ ಭುಜ ಇದ್ದಂತೆ ಎಂದು ಬಣ್ಣಿಸಿದ್ದಾರೆ. ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು. ಆದರೆ ಎಂದೆಂದಿಗೂ ಅವರೇ ಶ್ರೇಷ್ಠ ಅಲ್ಲ ಎಂದಿದ್ದಾರೆ.
ವಿರಾಟ್ ಕೊಹ್ಲಿ ಸಂದರ್ಭಕ್ಕೆ ಅನುಗುಣವಾಗಿ ಸಮಯೋಚಿತ ಆಟವನ್ನಾಡುತ್ತಾರೆ. ಉತ್ತಮ ಕೌಶಲ್ಯಗಳಿಂದ ರನ್ ಗಳನ್ನು ಸುಲಭವಾಗಿ ಕಲೆ ಹಾಕುವುದರ ಜೊತೆಗೆ ಪ್ರತಿ ಪಂದ್ಯದಲ್ಲೂ ತಮ್ಮ ಪ್ರದರ್ಶನ ಪುನರಾವರ್ತಿಸುವದರಲ್ಲಿ ಕೊಹ್ಲಿ ನಿಸ್ಸೀಮರು ಎಂದು ಹೇಳಿದ್ದಾರೆ.
Summary
ಮುಂಬೈ : ಟೀಂ ಇಂಡಿಯಾದ ಈ ಆಟಗಾರ ವಿಶ್ವ ಕ್ರಿಕೆಟ್‌ನ ತಲೆ ಹಾಗೂ ಭುಜವಿದ್ದಂತೆ !
Article Name
ಮುಂಬೈ : ಟೀಂ ಇಂಡಿಯಾದ ಈ ಆಟಗಾರ ವಿಶ್ವ ಕ್ರಿಕೆಟ್‌ನ ತಲೆ ಹಾಗೂ ಭುಜವಿದ್ದಂತೆ !
Description
ಸಂಗಕ್ಕಾರ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಸ್ತುತ ಕೊಹ್ಲಿ ವಿಶ್ವ ಕ್ರಿಕೆಟ್ ನ ತಲೆ ಹಾಗೂ ಭುಜ ಇದ್ದಂತೆ ಎಂದು ಬಣ್ಣಿಸಿದ್ದಾರೆ. ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು. ಆದರೆ ಎಂದೆಂದಿಗೂ ಅವರೇ ಶ್ರೇಷ್ಠ ಅಲ್ಲ ಎಂದಿದ್ದಾರೆ.

LEAVE A REPLY

Please enter your comment!
Please enter your name here