ನರಸಿಂಹರಾಜಪುರ  

ಕಾಮಗಾರಿ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರೆಲ್ಲಾ ವಿನಾ ಕಾರಣ ವಿಳಂಭ ಹಾಗೂ ಪದೇ ಪದೇ ಗುತ್ತಿಗೆದಾರರ ಬದಲಾವಣೆಯಾಗಿದ್ದರಿಂದಾಗಿ ನರಸಿಂಹರಾಜಪುರ ಪ್ರವಾಸಿ ಮಂದಿರದ ಬಳಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ಕಟ್ಟಡ ತಲೆ ಎತ್ತದೇ ನನೆಗುದಿಗೆ ಬಿದ್ದಿದೆ.

ಹಾಸ್ಟೆಲ್‌ ಕಟ್ಟಡ ಹಳೆಯದಾಗಿದೆ, ಹೊಸ ಕಟ್ಟಡವನ್ನು ನಿರ್ಮಿಸುವಂತೆ ವಿದ್ಯಾರ್ಥಿಗಳು ಹಲವು ಬಾರಿ ಮನವಿ ಮಾಡಿಕೊಂಡಿದ್ದರ ಫಲವಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರಕಾರ ಮುಂದಾಗಿತ್ತು. ಈ ನಿಟ್ಟಿನಲ್ಲಿ 2017ರಲ್ಲಿ ಹಳೆ ಕಟ್ಟಡ ತೆರವುಗೊಳಿಸಲಾಯಿತು.ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಯಿತು. ಅನುಮೋದನೆ ಸಿಕ್ಕ ಬಳಿಕ ಟೆಂಡರ್‌ ಕರೆದು ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು.ಆದರೆ, ಕೇಂದ್ರ ಕಾಮಗಾರಿಯನ್ನು ಕೈಗೊಳ್ಳಲು ವಿಳಂಭ ಮಾಡಿದ್ದರಿಂದಾಗಿ ಪುನಾ ಲ್ಯಾಂಡ್‌ ಆರ್ಮಿಗೆ ವಹಿಸಲಾಯಿತು. ಆದರೆ, ‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ’ ಎನ್ನುವಂತೆ ಕಾಮಗಾರಿ ವಹಿಸಿಕೊಂಡವರೆಲ್ಲಾ ಕೈ ತೊಳೆದುಕೊಂಡಿದ್ದಾರೆ. ಈಗ ಮತ್ತೆ ಪಿಆರ್‌ಡಿ ಗೆ ಕಾಮಗಾರಿ ನಿರ್ವಹಣೆ ವಹಿಸಲಾಗಿದೆ.ಆದಷ್ಟು ಶೀಘ್ರ ಕ್ರಿಯಾಯೋಜನೆ ತಯಾರಿಸಿ ಕಾಮಗಾರಿ ಆರಂಭಿಸಬೇಕಿದೆ.

ಹಾಗಾಗಿ ಸ್ವಂತ ಜಾಗವಿದ್ದರೂ ಬಾಡಿಗೆ ಕಟ್ಟಡದಲ್ಲೇ ಹಾಸ್ಟೆಲ್‌ ನಡೆಸುವ ಸ್ಥಿತಿ ಮುಂದವರಿದಿದೆ. ಕಟ್ಟಡ ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆದಾರರು ಪದೇ ಪದೇ ಬದಲಾಗುತ್ತಿರುವುದು ಸಮಾಜ ಕಲ್ಯಾಣ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. 47 ವಿದ್ಯಾರ್ಥಿಗಳಿದ್ದು, ಎರಡು ಮಳಿಗೆ ಹೊಂದಿರುವ ಬಾಡಿಗೆ ಕಟ್ಟಡದ ಕೆಳ ಮಳಿಗೆಯಲ್ಲಿ ಗಾಳಿ,ಬೆಳಕಿನ ಸಮಸ್ಯೆ ಎದ್ದು ಕಾಣುತ್ತಿದೆ. ಈಗಿರುವ ಶೌಚಾಲಯ ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ. ಇನ್ನು ಎರಡು ಶೌಚಾಲಯದ ಅವಶ್ಯಕತೆ ಇದೆ. ಪಿಆರ್‌ಡಿಯವರು ಆದಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸಿದರೆ ಸ್ವಂತ ಕಟ್ಟಡದ ಕನಸು ನನಸಾಗಲಿದೆ.

ಪಿಆರ್‌ಡಿ ಯವರು ಕ್ರಿಯಾಯೋಜನೆ ಸಿದ್ಧ ಮಾಡಿಕೊಟ್ಟರೆ ಮೇಲಧಿಕಾರಿಗಳಿಗೆ ಕಳುಹಿಸಿ ತಕ್ಷ ಣ ಟೆಂಡರ್‌ ಕರೆದು ಕಟ್ಟಣ ಕಾಮಗಾರಿ ಶೀಘ್ರವಾಗಿ ಆರಂಭಿಸಬಹುದು.ಕ್ರಿಯಾಯೋಜನೆ ಸಿದ್ಧ ಮಾಡಿಕೊಟ್ಟ ತಕ್ಷ ಣ ಹಣ ಮಂಜೂರಾಗುತ್ತದೆ.ನಾವು ಪ್ರತಿದಿನ ಪಿಅರ್‌ಡಿ ಯವರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಸ್ವಂತ ಕಟ್ಟಡದಲ್ಲಿಯೇ ಹಾಸ್ಟೆಲ್‌ ನಡೆಸಲಾಗುವುದು.

ಊಟ, ತಿಂಡಿ ಎಲ್ಲ ವ್ಯವಸ್ಥಿತವಾಗಿ ಸಿಗುತ್ತಿದೆ.ಬಾಡಿಗೆ ಕಟ್ಟಡದಲ್ಲಿ ಜಾಗದ ಸಮಸ್ಯೆ ಇದೆ. ಆದಷ್ಟು ಬೇಗ ಸರಕಾರದ ಸ್ವಂತ ಕಟ್ಟಡ ಅಗಬೇಕಾಗಿದೆ.ಇರುವುದಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೇವೆ.ಮುಖ್ಯ ರಸ್ತೆಯಲ್ಲಿಯೇ ಇರುವುದರಿಂದ ವಾಹನ ಓಡಾಟ ಅಧಿಕವಾಗಿದ್ದು ಓದಿಗೆ ಸ್ವಲ್ಪ ಸಮಸ್ಯೆಯಾಗುತ್ತಿದೆ.

:

LEAVE A REPLY

Please enter your comment!
Please enter your name here