ನಾಳೆ ನಡೆಯುವ ಟಿಪ್ಪು ಜಯಂತಿ ಮಾಡುವ ಸಮಿಶ್ರ ಸರ್ಕಾರ ಟಿಪ್ಪುಆಚರಣೆ ವಿರೋಧಿಸಿ ಭಾರತೀಯ ಜನತಾ ಪಕ್ಷ ಜಿಲ್ಲಾ ಘಟಕ ದಿಂದ ಜಿಲ್ಲಾಡಳಿತ ಭವನ ಮುಂದೆ ಪ್ರತಿಭಟನೆ ನಡೆಸಿದರು, ಟಿಪ್ಪು ಒಬ್ಬ ದುಷ್ಟ ಮತಾಂದ ಹಿಂದೂ ವಿರೋಧಿ, ಸಾವಿರಾರು ಹಿಂದೂಗಳ ಕಗ್ಗೊಲೆ ಮತ್ತು ಮತಾಂತರಕ್ಕೆ ಕಾರಣನಾದ ಟಿಪ್ಪು, ದೇಶದ ಅನೇಕ ಹಿಂದೂ ದೇವಾಲಯಗಳನ್ನು ಧ್ವಂಸ ಗೊಳಿಸಿ ಮತಾಂಧತೆ ಮರೆದ ವ್ಯಕ್ತಿಯ ಜಯಂತಿ ಯನ್ನು ಮಾಡುತ್ತಿರುವುದು ಹಿಂದೂ ವಿರೋಧಿ ಗಳಿಗೆ ಈ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಇದನ್ನು ಟಿಪ್ಪು ಜಯಂತಿ ಆಚರಣೆಯನ್ನು ಸರ್ಕಾರ ಕೈಬಿಡಬೇಕು ಎಂದರು.
ಸರಕಾರ ಗಲಾಟೆ,ಗಲಭೆ, ಕೋಮುಗಲಭೆಗೆ  ಪ್ರಚೋದನೆ ನೀಡುವ  ಟಿಪ್ಪು ಜಯಂತಿಯಿಂದ ರಾಜ್ಯದಲ್ಲಿ ಆಶಾಂತಿ ಮೂಡುತ್ತದೆ ಕೊಮುಗಲಭೆಗೆ ಕಾರಣವಾಗುತ್ತದೆ ಅದರಿಂದ ಟಿಪ್ಪು ಜಯಂತಿಯನ್ನು  ಕೈಬಿಡಬೇಕೆಂದು ಸಿಎಂಗೆ ಒತ್ತಾಯಿಸಿದರು.

ಕಳೆದ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುವ ಮೂಲಕ ರಾಜ್ಯದಲ್ಲಿ ಕೋಮುಗಲಭೆಗೆ ಕಾರಣವಾಗಿದ್ದು ಅನೇಕ ಹಿಂದು ಯುವಕರ ಹತ್ಯೆಯಾಗಿದ್ದವು ಅದರೆ ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ, ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಟಿಪ್ಪು ಜಯಂತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಆಪರ್ ಜಿಲ್ಲಾಧಿಕಾರಿ ಯವರಿಗೆ ಮನವಿ ಪತ್ರ ಸಲ್ಲಿಸಿದರು ಮುಖಂಡರಾದ ಯಲ್ಲಪ್ಪ ಭಜಂತ್ರಿ,ರಾಜು ರೇವಣಕರ, ಬಸವರಾಜ ಯಕಂಜಿ, ಶಿವು ಮೆಲ್ಲನ್ನಾಡ,ಅಶೋಕ ಮುತ್ತಿನಮಠ,ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here