ಮೈಸೂರು: ರಾಷ್ಟ್ರಕವಿ ಕುವೆಂಪು ಅವರು ಪುತ್ರ ಕೋಕಿಲೋದಯ ಚೈತ್ರ ಅವರು ಮೈಸೂರಿಗೆ ಭೇಟಿ ನೀಡಿದ್ದು, ಕುವೆಂಪು ಅಭಿಮಾನಿಗಳಲ್ಲಿ ಪುಳಕ ಮೂಡಿಸಿದ್ದಾರೆ.

ಕುವೆಂಪು ಅವರ ಪುತ್ರ ಎಂದ ತಕ್ಷಣ ಬಹುತೇಕರ ನೆನಪಿಗೆ ಬರುವುದು ದಿ.ಪೂರ್ಣಚಂದ್ರ ತೇಜಸ್ವಿ ಮಾತ್ರ. ಆದರೆ, ಕುವೆಂಪು ಅವರಿಗೆ ಮತ್ತೊಬ್ಬ ಪುತ್ರನಿದ್ದು, ಅವರು ಆಸ್ಪ್ರೇಲಿಯದಲ್ಲಿ ನೆಲೆಸಿರುವುದರಿಂದ ಹಲವರಿಗೆ ಅವರ ಪರಿಚಯವೇ ಇಲ್ಲ. ಅವರೇ ಕೋಕಿಲೋದಯ ಚೈತ್ರ. ಇವರು ಸಾಕಷ್ಟು ವರ್ಷಗಳಿಂದ ಆಸ್ಪ್ರೇಲಿಯದಲ್ಲಿಯೇ ವಾಸಿಸುತ್ತಿದ್ದು, ಇತ್ತೀಚೆಗೆ ತಮ್ಮ ಪತ್ನಿ ಮಾರ್ಲಿನ್‌ ಅವರೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಮೈಸೂರಿನಲ್ಲಿರುವ ಕುವೆಂಪು ಅವರ ನಿವಾಸ ‘ಉದಯರವಿ’ಗೆ ತೆರಳಿ ಅಲ್ಲಿ ನೆಲೆಸಿರುವ ಅವರ ಸಹೋದರಿ ತಾರಿಣಿ ಹಾಗೂ ಭಾವ ಪ್ರೊ.ಚಿದಾನಂದ ಗೌಡ ಅವರೊಂದಿಗೆ ಕೆಲ ಕಾಲ ಕಳೆದಿದ್ದಾರೆ. ಅಲ್ಲಿ ಬಾಲ್ಯ ಕಳೆದ ನೆನಪನ್ನು ಸಹೋದರಿ ಹಾಗೂ ಭಾವನೊಂದಿಗೆ ಹಂಚಿಕೊಂಡಿದ್ದಾರೆ. ಬಳಿಕ ಬೆಂಗಳೂರಿಗೆ ಹಿಂತಿರುಗಿದ್ದಾರೆ.

ಉದಯರವಿಯಲ್ಲಿ ಕೋಕಿಲೋದಯ ಚೈತ್ರ, ಮಾರ್ಲಿನ್‌, ತಾರಿಣಿ ಹಾಗೂ ತಾವು ತೆಗೆಸಿಕೊಂಡ ಫೋಟೊವನ್ನು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಆಗಿರುವ ಪ್ರೊ.ಚಿದಾನಂದ ಗೌಡ ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಸಾಕಷ್ಟು ಮಂದಿ ಕೋಕಿಲೋದಯ ಅವರನ್ನು ಭೇಟಿಯಾಗಲು ಬಯಸಿದ್ದರಾದರೂ ಅಷ್ಟೊತ್ತಿಗೆ ಅವರು ಮೈಸೂರಿನಿಂದ ತೆರಳಿದ್ದರು. ಫೇಸ್‌ಬುಕ್‌ನಲ್ಲಿನ ಫೊಟೋಗೆ ಸಾಕಷ್ಟು ಲೈಕ್‌ಗಳು ಬಂದಿದ್ದು, ಕೋಕಿಲೋದಯ ಅವರ ದರ್ಶನ ಭಾಗ್ಯ ಕರುಣಿಸಿದ್ದಕ್ಕೆ ಧನ್ಯವಾದಗಳು ಎಂದು ಚಿದಾನಂದ ಗೌಡರಿಗೆ ಪ್ರತಿಕ್ರಿಯಿಸಿದ್ದಾರೆ.

Summary
ಮೈಸೂರು : ಕುವೆಂಪು ಪುತ್ರ ಕೋಕಿಲೋದಯ ಚೈತ್ರ ಮೈಸೂರಿಗೆ ಭೇಟಿ
Article Name
ಮೈಸೂರು : ಕುವೆಂಪು ಪುತ್ರ ಕೋಕಿಲೋದಯ ಚೈತ್ರ ಮೈಸೂರಿಗೆ ಭೇಟಿ
Description
ಫೇಸ್‌ಬುಕ್‌ನಲ್ಲಿನ ಫೊಟೋಗೆ ಸಾಕಷ್ಟು ಲೈಕ್‌ಗಳು ಬಂದಿದ್ದು, ಕೋಕಿಲೋದಯ ಅವರ ದರ್ಶನ ಭಾಗ್ಯ ಕರುಣಿಸಿದ್ದಕ್ಕೆ ಧನ್ಯವಾದಗಳು ಎಂದು ಚಿದಾನಂದ ಗೌಡರಿಗೆ ಪ್ರತಿಕ್ರಿಯಿಸಿದ್ದಾರೆ. 

LEAVE A REPLY

Please enter your comment!
Please enter your name here