ಎಚ್.ಡಿ.ಕೋಟೆಯಲ್ಲಿ 50ಕ್ಕೂ ಮನೆಗಳಿಗೆ ಜಲಾವೃತ
ಗಂಜಿಕೇಂದ್ರಕ್ಕೆ ಕುಟುಂಬಗಳು ಶಿಫ್ಟ್

ಕೇರಳದ ವೈನಾಡು ಜಿಲ್ಲೆಯಲ್ಲಿ ಭೀಕರ ಮಳೆಯಿಂದ ಕಬಿನಿ ಜಲಾಶಯ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ 50ಕ್ಕೂ ಹೆಚ್ಚು ಮನೆಗಳು ಜಲಾವೃತ್ತವಾಗಿದ್ದು, ಮಳೆ ನಿರಾಶ್ರಿತರನ್ನು ಗಂಜಿಕೇಂದ್ರಕ್ಕೆ ಸಾಗಿಸಲು ವಿಪತ್ತು ನಿರ್ವಹಣಾ ತಂಡ ಹರಸಾಹಸ ಪಡುವಂತಾಗಿದೆ.
ಕೇರಳ ರಾಜ್ಯದ ಗಡಿಭಾಗದಲ್ಲಿರುವ ಎಚ್.ಡಿ.ಕೋಟೆ ತಾಲ್ಲೂಕಿನ ಆನೆಮಾಳ, ಡಿ.ಬಿ.ಕುಪ್ಪೆ, ಮಚ್ಚೂರು, ಉದ್ಬೂರು, ಸಿಂಹಳಿ, ವಡಕನಮಾಳ ಸೇರಿದಂತೆ ಸುತ್ತಮುತ್ತಲ್ಲ ಗ್ರಾಮಗಳು ಜಲಾವೃತ್ತವಾಗಿದ್ದು,ಡಿ.ಬಿ.ಕುಪ್ಪೆಯ ಸರ್ಕಾರಿ ಶಾಲೆಯಲ್ಲಿ 35 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಇಲ್ಲಿಗೆ ನಿವಾಸಿಗಳನ್ನು ಬೋಡ್‍ಗಳ ಮೂಲಕ ಕರೆದುಕೊಂಡು ಬರಲು ಮಳೆಯನ್ನು ಲೆಕ್ಕಿಸದೇ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ.
ತಿ.ನರಸೀಪುರ ತಾಲ್ಲೂಕಿಕ ತಲಕಾಡು ಹೋಬಳಿಯ ತಡಿಮಾಲಂಗಿ ಗ್ರಾಮದ ದೇವಾಲಯ ಮತ್ತು ಎಂಟು ಮನೆಗಳು ನೀರಿನಲ್ಲಿ ಮುಳುಗಿ ಹೋಗಿದೆ. ಈ ಗ್ರಾಮದ ಸುರಕ್ಷಿತವಾಗಿ ಸಾಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here