ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ಮತ್ತೆ ಒಂದಾಗುತ್ತಿದ್ದಾರೆ. ಈ ಹಿಂದೆ “ಭಜರಂಗಿ”, “ವಜ್ರಕಾಯ” ಚಿತ್ರಗಳನ್ನು ನೀಡಿದ್ದ ಈ ಜೋಡಿ ಈಗ “ಮೈ ನೇಮ್ ಈಸ್ ಅಂಜಿ” ಎಂಬ ಹೊಸ ಚಿತ್ರ ತಯಾರಿಯಲ್ಲಿದೆ.
ಈ ಚಿತ್ರ ಕಮರ್ಷಿಯಲ್ ಎಂಟರ್ಟೈನ್ ಚಿತ್ರವಾಗಿದ್ದು ಜಯಣ್ಣ, ಭೋಗೇಂದ್ರ ಜೋಡಿ ಜಯಣ್ಣ ಫಿಲ್ಮ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಿದೆ. ಹರ್ಷ ಈ ಶೀರ್ಷಿಕೆಯನ್ನು 2016ರಲ್ಲೇ ನೊಂದಾಯಿಸಿದ್ದರು.  ಇನ್ನು ಈ ನಿರ್ಮಾಪಕ ಜೊಡಿ ಹಾಗೂ ಶಿವರಾಜ್ ಕುಮಾರ್ ಅಭಿನಯದಲ್ಲಿ ಮೂಡಿಬರುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಈ ಹಿಂದೆ “ಬಂಗಾರ ಸನ್ ಆಫ್ ಬಂಗಾರದ ಮನುಷ್ಯ”, “ಮುಫ್ತಿ”, “ರುಸ್ತುಂ” ಚಿತ್ರಗಳಲ್ಲಿ ಇದೇ ನಿರ್ಮಾಪಕರು-ನಟ ಜೋಡಿ ಇದ್ದಿತ್ತು.

ಶಿವರಾತ್ರಿ ದಿನವೇ ಈ ಚಿತ್ರದ ಕುರಿತು ಒಪ್ಪಂದಕ್ಕೆ ಬರಲಾಗಿದ್ದು ಮುಂದಿನ ಜೂನ್ ಗೆ ಚಿತ್ರದ ಮಹೂರ್ತ ಕಾರ್ಯಕ್ರಮ ನೆರವೇರಲಿದೆ.ಶಿವಣ್ಣನಿಗಾಗಿ ನಿರ್ದೇಶಕ ಹರ್ಷ ಇದಾಗಲೇ ಚಿತ್ರಕಥೆಯನ್ನು ತಯಾರಿಸಿಟ್ಟಿದ್ದಾರೆ ಎನ್ನುವುದು ಗಮನಾರ್ಹ.ಶಿವರಾಜ್ ಕುಮಾರ್ ಜತೆ ಇದಲ್ಲದೆ ಇನ್ನೊಂದುಯೋಜನೆಯನ್ನು ಸಹ ಹರ್ಷ ಹೊಂದಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದ್ದು ಆ ಕುರಿತು ಇನ್ನೂ ಸ್ಪಷ್ಟ ವಿವರಗಳು ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here