ರಾಯಚೂರು

ನೀತಿ ಆಯೋಗದ ವರದಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಜೈನ್ ಸಂಘದಿಂದ ರಾಜ್ಯದ ಕೆರೆಗಳ ಪುನಶ್ಚೇತನಕ್ಕೆ ಚರ್ಚೆ ಮಾಡಿದ್ದು ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಪುನಶ್ಚೇತನಕ್ಕೆ ಒಪ್ಪಿಗೆ ನೀಡಿದ್ದಾರೆಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ. ಸರಕಾರ ಹಾಗೂ ರೈತರ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಂಘದವತಿಯಿಂದ ಮಷಿನರ್ ಗಳನ್ನ ನೀಡಲಿದ್ದಾರೆ ಇದರಿಂದ ರೈತರು ಕೆರೆಗಳ ಹೂಳನ್ನ ತಮ್ಮ ತಮ್ಮ ಹೊಲಗಳಿಗೆ ತೆಗೆದುಕೊಂಡು ಕೆರೆಗಳ ಪುನಶ್ಚೇತನಕ್ಕೆ ಅನುವಾಗಬೇಕು ಎಂದರು.
ಸಿಂಧನೂರಿನಲ್ಲಿ ಮಾತನಾಡಿದ ಅವರು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸರಕಾರಿ ಕೆರೆಗಳ ಪುನಶ್ಚೇತನ ಕೆಲಸ ಇಗಾಗಲೆ ಆರಂಭವಾಗಿದೆ ಎಂದು ಮೀನುಗಾರಿಕೆ ಮತ್ತು ಪಶಗೋಪನೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here