ರೆಬೆಲ್ ಮರೆಯಾದರೂ ತನ್ನ ಪ್ರೀತಿ ಪಾತ್ರನ ಮಗುವಿಗಾಗಿ ಬಿಟ್ಟು ಹೋದ ವಿಶೇಷ ಗಿಫ್ಟ್, ಮನಕಲಕುತ್ತೆ!

0
33
ಬೆಂಗಳೂರು: ವಿಶೇಷ ಅತಿಥಿ ಆಗಮನದ ಸಂತಸದಲ್ಲಿರುವ ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಮಂಡ್ಯದ ಗಂಡು ಅಂಬರೀಶ್ ಅತ್ಯಮೂಲ್ಯವಾದ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಅಂಬರೀಶ್ ದಿವಂಗತರಾಗಿ 15 ದಿನಗಳು ಕಳೆದಿದ್ದು ಯಶ್ ಗೆ ಮಗು ಹುಟ್ಟಿ ವಾರವಷ್ಟೇ ಆಗಿದೆ. ಅಂಬರೀಶ್ ಅವರು ಯಶ್ ಮಗಳಿಗೆ ಉಡುಗೊರೆ ಕೊಡಲು ಹೇಗೆ ಸಾಧ್ಯ ಎಂದು ಅಚ್ಚರಿಯಾಗಬಹುದು. 
ಅಂಬರೀಶ್ ಅವರು ಸಾಯುವ ಮುನ್ನವೇ ಯಶ್ ಗೆ ಹುಟ್ಟಲಿರುವ ಮಗುವಿಗಾಗಿ 1.5 ಲಕ್ಷ ರುಪಾಯಿ ಬೆಲೆಯ ತೊಟ್ಟಿಲನ್ನು ಬುಕ್ ಮಾಡಿದ್ದರು. ಈ ವಿಚಾರ ಅಂಬರೀಶ್ ಹೊರತುಪಡಿಸಿ ಯಾರಿಗೂ ಗೊತ್ತಿರಲಿಲ್ಲ. ಸುಮಲತಾ ಅವರಿಗೆ ಕೂಡ ಈ ವಿಷಯ ತಿಳಿದಿರಲಿಲ್ಲ. ಅಂಬರೀಶ್ ಬಳಸುತ್ತಿದ್ದ ಮೊಬೈಲ್ ಗೆ ಮೊನ್ನೆ ತೊಟ್ಟಿಲು ರೆಡಿ ಎಂಬ ಸಂದೇಶ ಬಂದಿದೆ. ನಂತರ ಈ ಬಗ್ಗೆ ಸುಮಲತಾ ವಿಚಾರಿಸಿದಾಗ ಅಂಬರೀಶ್ ಅವರು ಯಶ್ ದಂಪತಿಗೆ ಹುಟ್ಟುವ ಮಗುವಿಗಾಗಿ ತೊಟ್ಟಿಲು ಆರ್ಡರ್ ಮಾಡಿದ್ದರು ಎಂದು ತಿಳಿದುಬಂದಿದೆ. ನಂತರ ಸುಮಲತಾ ಅವರು ಯಶ್ ಗೆ ಕರೆ ಮಾಡಿ ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲ್ಲು ಬಂದಿದೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಅಂಬರೀಶ್ ಮೃತಪಟ್ಟಾಗ ಯಶ್ ಮೂರು ದಿನವೂ ಪಾರ್ಥಿವ ಶರೀರದೊಂದಿಗೆ ಇದ್ದು ಅಂತ್ಯ ಸಂಸ್ಕಾರದ ವಿಧಿ ವಿಧಾನ ನಡೆಯಲು ಸಹಕರಿಸಿದ್ದರು.

LEAVE A REPLY

Please enter your comment!
Please enter your name here