ಹಾಸನ: ಹಾಸನ ಜಿಲ್ಲೆಯ ಇಬ್ಬರು ಪ್ರಮುಖ ಮುಖಂಡರಾದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಮತ್ತು ಕಾಂಗ್ರೆಸ್ ಮುಖಂಡ ಎ ಮಂಜು ನಡುವಿನ ವಾಕ್ಸಮರ ಕಮ್ಮಿಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪ್ರತೀ ದಿನ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷವಾದ ಜೆಡಿಎಸ್ ಮುಖಂಡರ ಮೇಲೆ, ಪ್ರಮುಖವಾಗಿ ದೇವೇಗೌಡರ ಕುಟುಂಬದ ಮೇಲೆ ವಾಗ್ದಾಳಿ ನಡೆಸುವ ಮಂಜು, ದಲಿತರು ಎದುರು ಬಂದರೆ ಸಚಿವ ರೇವಣ್ಣ ಸ್ನಾನ ಮಾಡಿಕೊಂಡು ಬರುತ್ತಾರೆ ಎನ್ನುವ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ.

ಮೈತ್ರಿ ಇರಲಿ, ಹೋಗಲಿ ನಾನು ಮಾತ್ರ ಎಂದಿಗೂ ದೇವೇಗೌಡರ ಕುಟುಂಬಕ್ಕೆ ಬೆಂಬಲ ಕೊಡುವುದಿಲ್ಲ ಎಂದಿರುವ ಮಂಜು, ಪರಮೇಶ್ವರ್ ಅವರಿಗೆ ಗೃಹಖಾತೆ ಹೋಗಿರುವುದಕ್ಕೆ ಸಾಂತ್ವನದ ಮಾತನ್ನು ರೇವಣ್ಣ ಆಡುತ್ತಾರೆ. ಅವರು ದಲಿತರ ಪರ ಯಾವ ನಿಲುವನ್ನು ಹೊಂದಿದ್ದಾರೆ ಎನ್ನುವುದು ನಮಗೆ ತಿಳಿದಿದೆ.

ಮನೆಯಿಂದ ಹೊರಡುವಾಗ, ದಲಿತರು ಏನಾದರೂ ಎದುರು ಬಂದರೆ, ಮತ್ತೆ ಮನೆಗೆ ಹೋಗಿ, ಸ್ನಾನ ಮಾಡಿ ಪೂಜೆ ಮಾಡಿ ಬರುತ್ತಾರೆ. ಇಂತಹ ನಿಲುವನ್ನು ಹೊಂದಿರುವ ರೇವಣ್ಣ, ನಮ್ಮ ಮುಖಂಡ ಪರಮೇಶ್ವರ್ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ.

ಬಿಲ್ಡಿಂಗ್ ಕಟ್ಟಿದರೆ ಅಭಿವೃದ್ದಿ ಕೆಲಸ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ಕೆಲವು ಬಿಲ್ಡರ್ಸ್ ಮತ್ತು ಗುತ್ತಿಗೆದಾರರಿಗೆ ಲಾಭವಾಗುತ್ತದೆಯೇ ಹೊರತು, ರಾಜ್ಯದ ಜನತೆಗೆ ಅಲ್ಲ. ರೇವಣ್ಣ ಏನು, ತನ್ನ ಮನೆಯಿಂದ ದುಡ್ಡು ಖರ್ಚು ಮಾಡಿ, ಕೆಲಸ ಮಾಡಿಸುತ್ತಿದ್ದಾರಾ ಎಂದು ಮಂಜು ಪ್ರಶ್ನಿಸಿದ್ದಾರೆ. ನಮ್ಮ ಪಕ್ಷದ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೋ, ನಿಗಮ ಮಂಡಳಿಯ ಹುದ್ದೆ ನೀಡಬೇಕೋ ಎನ್ನುವುದನ್ನು ನಮ್ಮ ಮುಖಂಡರು ನಿರ್ಧರಿಸುತ್ತಾರೆ, ಅದಕ್ಕೆ ಕುಮಾರಸ್ವಾಮಿಯವರಾಗಲಿ ಅಥವಾ ದೇವೇಗೌಡರ ಕುಟುಂಬ ತಲೆಹಾಕುವ ಅವಶ್ಯಕತೆಯಿಲ್ಲ ಎಂದು ಮಂಜು ಹೇಳಿದ್ದಾರೆ.

Summary
ರೇವಣ್ಣ ಮತ್ತು ಕಾಂಗ್ರೆಸ್ ಮುಖಂಡ ಎ ಮಂಜು ನಡುವಿನ ವಾಕ್ಸಮರ ಕಮ್ಮಿಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.
Article Name
ರೇವಣ್ಣ ಮತ್ತು ಕಾಂಗ್ರೆಸ್ ಮುಖಂಡ ಎ ಮಂಜು ನಡುವಿನ ವಾಕ್ಸಮರ ಕಮ್ಮಿಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.
Description
ಬಿಲ್ಡಿಂಗ್ ಕಟ್ಟಿದರೆ ಅಭಿವೃದ್ದಿ ಕೆಲಸ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ಕೆಲವು ಬಿಲ್ಡರ್ಸ್ ಮತ್ತು ಗುತ್ತಿಗೆದಾರರಿಗೆ ಲಾಭವಾಗುತ್ತದೆಯೇ ಹೊರತು, ರಾಜ್ಯದ ಜನತೆಗೆ ಅಲ್ಲ. ರೇವಣ್ಣ ಏನು, ತನ್ನ ಮನೆಯಿಂದ ದುಡ್ಡು ಖರ್ಚು ಮಾಡಿ, ಕೆಲಸ ಮಾಡಿಸುತ್ತಿದ್ದಾರಾ ಎಂದು ಮಂಜು ಪ್ರಶ್ನಿಸಿದ್ದಾರೆ. ನಮ್ಮ ಪಕ್ಷದ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೋ, ನಿಗಮ ಮಂಡಳಿಯ ಹುದ್ದೆ ನೀಡಬೇಕೋ ಎನ್ನುವುದನ್ನು ನಮ್ಮ ಮುಖಂಡರು ನಿರ್ಧರಿಸುತ್ತಾರೆ, ಅದಕ್ಕೆ ಕುಮಾರಸ್ವಾಮಿಯವರಾಗಲಿ ಅಥವಾ ದೇವೇಗೌಡರ ಕುಟುಂಬ ತಲೆಹಾಕುವ ಅವಶ್ಯಕತೆಯಿಲ್ಲ ಎಂದು ಮಂಜು ಹೇಳಿದ್ದಾರೆ.

LEAVE A REPLY

Please enter your comment!
Please enter your name here