ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಸಂಬಂಧ ಬಜೆಟ್‌ಗೆ ಮುನ್ನ ಕೇಂದ್ರ ಸರಕಾರಕ್ಕೆ ವಿವರವಾದ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ.

ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಬ್‌ಅರ್ಬನ್‌ ರೈಲು ಯೋಜನೆ ಸಂಬಂಧ ತಾಂತ್ರಿಕ ಅಂಶ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಯೋಜನೆ ಕುರಿತ ರೈಲ್ವೆ ಇಲಾಖೆಯ ಪ್ರಾತ್ಯಕ್ಷಿಕೆ ವೀಕ್ಷಿಸಿದ ಬಳಿಕ ಈ ನಿರ್ದೇಶನ ನೀಡಿದ ಸಿಎಂ , ಸಬ್‌ಅರ್ಬನ್‌ ರೈಲು ಮತ್ತು ಮೆಟ್ರೊ ರೈಲು ಮಾರ್ಗಗಳು ಓವರ್‌ಲ್ಯಾಪ್‌ ಆಗುವ ಕಡೆ ಮತ್ತೊಂದು ಸುತ್ತಿನ ತಾಂತ್ರಿಕ ಚರ್ಚೆ ನಡೆಸಿ ವಿವರ ಸಲ್ಲಿಸುವಂತೆ ಸೂಚಿಸಿದರು.

ಉಪನಗರ ಯೋಜನೆಗೆ ಅಂತಿಮ ರೂಪು ಕೊಡುವ ಮುನ್ನ ಇನ್ನಷ್ಟು ವಿಸ್ತೃತ ಚರ್ಚೆಯಾಗಬೇಕಿದೆ. ಸಂಪನ್ಮೂಲ ಹೊಂದಿಸುವುದು ಸೇರಿದಂತೆ ಕೆಲ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಬರಬೇಕಿದೆ. ಈ ಕುರಿತ ಪೂರ್ಣ ವಿವರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಭೆ ಬಳಿಕ ಮಾತನಾಡಿದ ಡಿಸಿಎಂ ಜಿ.ಪರಮೇಶ್ವರ್‌ ತಿಳಿಸಿದರು.

40 ಸಾವಿರ ಕೋಟಿ ರೂ. ವೆಚ್ಚ: ಸದ್ಯದ ಲೆಕ್ಕಾಚಾರದಂತೆ ಯೋಜನೆಗೆ 40 ಸಾವಿರ ಕೋಟಿ ರೂ. ಬಂಡವಾಳ ಅಗತ್ಯ. ಈ ಪೈಕಿ ಕೇಂದ್ರ ಮತ್ತು ರಾಜ್ಯ ಸರಕಾರಗಳು 20:20 ರ ಸೂತ್ರದಡಿ ಅನುದಾನ ಭರಿಸಬೇಕು ಎಂಬ ಯೋಚನೆಯಿದೆ. ಉಳಿದ ಮೊತ್ತಕ್ಕೆ ಸಾಲ ಕೊಂಡುಕೊಳ್ಳಲಾಗುವುದು. ಆದರೆ, ಎಲ್ಲಿಂದ ಮತ್ತು ಹೇಗೆ ಸಾಲ ಮಾಡುವುದು ಎನ್ನುವುದು ಇತ್ಯರ್ಥವಾಗಿಲ್ಲ. ಮುಂಬರುವ ದಿನಗಳಲ್ಲಿ ಯೋಜನಾ ವೆಚ್ಚ ಹೆಚ್ಚಾಗುವ ಸಂಭವವೂ ಇರುತ್ತದೆ. ರೈಲ್ವೆ ಹಳಿ ವಿಸ್ತರಣೆ ಸಂಬಂಧವೂ ಮತ್ತಷ್ಟು ಸ್ಪಷ್ಟತೆ ಬರಬೇಕಿದೆ. ಹಾಗಾಗಿ ಕೇಂದ್ರ ಬಜೆಟ್‌ಗೆ ಮುನ್ನ ಈ ಯೋಜನೆ ಸಂಬಂಧ ಮತ್ತೊಂದು ಸಭೆ ನಡೆಸಲಾಗುವುದು. ಬಳಿಕ ಕೇಂದ್ರ ಸರಕಾರದ ನೆರವು ಬಯಸಿ ಪ್ರಸ್ತಾವನೆ ಕಳುಹಿಸಿ ಕೊಡಲಾಗುವುದು ಎಂದು ಹೇಳಿದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್‌ ಹಾಗೂ ಉನ್ನತಾಧಿಕಾರಿಗಳು ಸಭೆಯಲ್ಲಿದ್ದರು.

Summary
 ರೈಲು ಯೋಜನೆ ಸಂಬಂಧ ಬಜೆಟ್‌ಗೆ ಮುನ್ನ ಕೇಂದ್ರ ಸರಕಾರಕ್ಕೆ ವಿವರವಾದ ಪ್ರಸ್ತಾವನೆ
Article Name
ರೈಲು ಯೋಜನೆ ಸಂಬಂಧ ಬಜೆಟ್‌ಗೆ ಮುನ್ನ ಕೇಂದ್ರ ಸರಕಾರಕ್ಕೆ ವಿವರವಾದ ಪ್ರಸ್ತಾವನೆ
Description
ಉಪನಗರ ಯೋಜನೆಗೆ ಅಂತಿಮ ರೂಪು ಕೊಡುವ ಮುನ್ನ ಇನ್ನಷ್ಟು ವಿಸ್ತೃತ ಚರ್ಚೆಯಾಗಬೇಕಿದೆ. ಸಂಪನ್ಮೂಲ ಹೊಂದಿಸುವುದು ಸೇರಿದಂತೆ ಕೆಲ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಬರಬೇಕಿದೆ. ಈ ಕುರಿತ ಪೂರ್ಣ ವಿವರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಭೆ ಬಳಿಕ ಮಾತನಾಡಿದ ಡಿಸಿಎಂ ಜಿ.ಪರಮೇಶ್ವರ್‌ ತಿಳಿಸಿದರು.  40 ಸಾವಿರ ಕೋಟಿ ರೂ. ವೆಚ್ಚ: ಸದ್ಯದ ಲೆಕ್ಕಾಚಾರದಂತೆ ಯೋಜನೆಗೆ 40 ಸಾವಿರ ಕೋಟಿ ರೂ. ಬಂಡವಾಳ ಅಗತ್ಯ. ಈ ಪೈಕಿ ಕೇಂದ್ರ ಮತ್ತು ರಾಜ್ಯ ಸರಕಾರಗಳು 20:20 ರ ಸೂತ್ರದಡಿ ಅನುದಾನ ಭರಿಸಬೇಕು ಎಂಬ ಯೋಚನೆಯಿದೆ. ಉಳಿದ ಮೊತ್ತಕ್ಕೆ ಸಾಲ ಕೊಂಡುಕೊಳ್ಳಲಾಗುವುದು. ಆದರೆ, ಎಲ್ಲಿಂದ ಮತ್ತು ಹೇಗೆ ಸಾಲ ಮಾಡುವುದು ಎನ್ನುವುದು ಇತ್ಯರ್ಥವಾಗಿಲ್ಲ. ಮುಂಬರುವ ದಿನಗಳಲ್ಲಿ ಯೋಜನಾ ವೆಚ್ಚ ಹೆಚ್ಚಾಗುವ ಸಂಭವವೂ ಇರುತ್ತದೆ. ರೈಲ್ವೆ ಹಳಿ ವಿಸ್ತರಣೆ ಸಂಬಂಧವೂ ಮತ್ತಷ್ಟು ಸ್ಪಷ್ಟತೆ ಬರಬೇಕಿದೆ. ಹಾಗಾಗಿ ಕೇಂದ್ರ ಬಜೆಟ್‌ಗೆ ಮುನ್ನ ಈ ಯೋಜನೆ ಸಂಬಂಧ ಮತ್ತೊಂದು ಸಭೆ ನಡೆಸಲಾಗುವುದು. ಬಳಿಕ ಕೇಂದ್ರ ಸರಕಾರದ ನೆರವು ಬಯಸಿ ಪ್ರಸ್ತಾವನೆ ಕಳುಹಿಸಿ ಕೊಡಲಾಗುವುದು ಎಂದು ಹೇಳಿದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್‌ ಹಾಗೂ ಉನ್ನತಾಧಿಕಾರಿಗಳು ಸಭೆಯಲ್ಲಿದ್ದರು. 

LEAVE A REPLY

Please enter your comment!
Please enter your name here