ರೋಣ: ಇಲ್ಲಿ ತಾಲೂಕಿನ ಅಭಿವೃದ್ಧಿಯ ಬಗ್ಗೆ ರ್ಚಚಿಸಲು ಬಂದಿದ್ದೀರಾ? ಇಲ್ಲವೇ, ಜಗಳ ಮಾಡಲು ಬಂದಿದ್ದೀರಾ ಎಂದು ಜಿಪಂ ಸದಸ್ಯೆಯರಾದ ಮಂಜುಳಾ ಹುಲ್ಲಣ್ಣವರ ಹಾಗೂ ರೂಪಾ ಅಂಗಡಿ ಅವರನ್ನು ಶಾಸಕ ಕಳಕಪ್ಪ ಬಂಡಿ ತರಾಟೆಗೆ ತೆಗೆದುಕೊಂಡ ಪಟ್ಟಣದ ತಾಪಂ ಸಭಾಭವನದಲ್ಲಿ ಶನಿವಾರ ನಡೆದ ತೈಮಾಸಿಕ ಕೆಡಿಪಿ ಸಭೆಯಲ್ಲಿ ಜರುಗಿತು.

ಸಭೆಯಲ್ಲಿ ಜಿಪಂ ಸದಸ್ಯೆ ಮಂಜುಳಾ ಹುಲ್ಲಣ್ಣವರ ತಮ್ಮ ಪಕ್ಕದಲ್ಲಿ ಕುಳಿತ ಅಧಿಕಾರಿಯೊಬ್ಬರ ಜೊತೆ ಮಾತನಾಡುತ್ತಿರುವಾಗ ಶಾಸಕ ಬಂಡಿ ಅವರು ‘ಮಂಜುಳಾ ಅವರೇ ಸುಮ್ಮನೇ ಕುಳಿತುಕೊಳ್ರೀ’ ಎಂದರು. ಆಗ, ಮಂಜುಳಾ ಹುಲ್ಲಣ್ಣವರ ಸುಮ್ಮನೇ ಕುಳಿತರು.

ಶಿಶು ಅಭಿವೃದ್ಧಿ ಅಧಿಕಾರಿ ನಾಗನಗೌಡ ಪಾಟೀಲ ಅವರಿಂದ ಇಲಾಖೆಯ ಪ್ರಗತಿಯ ಬಗ್ಗೆ ರ್ಚಚಿಸಿದರು. ಆಗ ಮತ್ತೇ, ಮಧ್ಯ ಪ್ರವೇಶಿಸಿದ ಜಿಪಂ ಸದಸ್ಯೆ ಮಂಜುಳಾ, ‘ರೀ ನಾಗನಗೌಡ್ರೇ ನಮ್ಮ ಅಂಗನವಾಡಿಯ ಬಗ್ಗೆ ಏನು ಮಾಡಿರೀ’ ಎಂದರು. ಆಗ ಮತ್ತೇ ಗರಂ ಆದ ಶಾಸಕರು, ‘ಏನ್ರೀ ನೀವು’ ಎನ್ನುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಜಿಪಂ ಮಾಜಿ ಉಪಾಧ್ಯಕ್ಷೆ ರೂಪಾ ಅಂಗಡಿ, ‘ಅಲ್ರೀ ನಾವೇನು ಇಲ್ಲಿ ಸುಮ್ಮನೇ ಕುಳಿತುಕೊಂಡು ಹೋಗಲು ಬಂದಿಲ್ಲ. ನಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಕೇಳಿದ್ರೇ ಏನು ತಪ್ಪಾಯಿತು’ ಎಂದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ, ಯಾವುದೇ ವಿದ್ಯಾರ್ಥಿಗಳಿಂದ ವಸತಿ ನಿಲಯದಲ್ಲಿ ಊಟದ ಕೊರತೆಯಾಗಿದೆ ಎಂದು ನನಗೆ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಯಾವುದೇ ವಸತಿ ನಿಲಯಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿದ್ದರೆ, ಟಾಸ್ಕ್​ಫೋರ್ಸ್ ಅಡಿ ಸರಿಪಡಿಸಿ ಎಂದು ತಹಸೀಲ್ದಾರ್​ಗೆ ಸೂಚಿಸಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ದೀಪಾಶ್ರೀ ವರದಿ ನೀಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಶಾಸಕರು, ನಮ್ಮ ತಾಲೂಕಿನಲ್ಲಿ ಎಷ್ಟು ಕೆರೆಗಳಿವೆ ಯಾವ್ಯಾವು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ದೀಪಾಶ್ರೀ ತಡಬಡಿಸಿದರು.

ಪೂರ್ತಿ ಮಾಹಿತಿ ನೀಡಿ: ಜಿಪಂ ಇಂಜಿನಿಯರ್ ಮಹಾದೇವಪ್ಪ ತಮ್ಮ ಇಲಾಖೆಯ ಪ್ರಗತಿ ವರದಿ ನೀಡಿ, ಇಲಾಖೆಯಿಂದ ಒಟ್ಟು 14 ಕೆಲಸಗಳಿದ್ದವು. ಅದರಲ್ಲಿ 10 ಕೆಲಸ ಮುಗಿದಿದ್ದು, ಇನ್ನು 4 ಕೆಲಸಗಳು ಬಾಕಿ ಇವೆ ಎಂದರು. ‘ಅಲ್ರೀ ಮಹಾದೇವಪ್ಪ ಯಾವ 10 ಕೆಲಸ ಮುಗಿದಿದೆ, ಯಾವ 4 ಕೆಲಸ ಬಾಕಿ ಇದೆ ಎನ್ನುವ ಮಾಹಿತಿ ಎಲ್ಲಿದೆ’ ಎಂದು ಶಾಸಕರು ಪ್ರಶ್ನಿಸಿದರು. ಇದರಿಂದ ಮಹಾದೇವಪ್ಪ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ನಂತರ ಅವುಗಳ ಸಂಪೂರ್ಣ ಮಾಹಿತಿ ಕೊಡುತ್ತೇನೆ ಎಂದರು. ಇದರಿಂದ ಕೋಪಗೊಂಡ ಶಾಸಕರು ಜನಪ್ರತಿನಿಧಿಗಳನ್ನು ಕತ್ತಲಲ್ಲಿಟ್ಟು ಆಡಳಿತ ನಡೆಸುವುದನ್ನು ನಾನು ಎಂದು ಸಹಿಸುವುದಿಲ್ಲ ಎಂದು ಮಹಾದೇವಪ್ಪ ಸೇರಿ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Summary
ರೋಣ : ಶಾಸಕರಿಂದ ಅಧಿಕಾರಿಗಳ ತರಾಟೆ !
Article Name
ರೋಣ : ಶಾಸಕರಿಂದ ಅಧಿಕಾರಿಗಳ ತರಾಟೆ !
Description
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ದೀಪಾಶ್ರೀ ವರದಿ ನೀಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಶಾಸಕರು, ನಮ್ಮ ತಾಲೂಕಿನಲ್ಲಿ ಎಷ್ಟು ಕೆರೆಗಳಿವೆ ಯಾವ್ಯಾವು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ದೀಪಾಶ್ರೀ ತಡಬಡಿಸಿದರು.

LEAVE A REPLY

Please enter your comment!
Please enter your name here