ದುಬೈ: ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಖ್ಯಾತ ಗಾಯಕ ಮಿಕಾ ಸಿಂಗ್ ರನ್ನು ಯುಎಇನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಸುದ್ದಿಸಂಸ್ಥೆಯೊಂದರ ವರದಿಯ ಪ್ರಕಾರ ಗಾಯಕ ಮಿಕಾ ಸಿಂಗ್ ವಿರುದ್ಧ 17 ವರ್ಷದ ಬ್ರೆಜಿಲ್ ಮೂಲದ ಯುವತಿಯೊಬ್ಬಳು ದೂರು ನೀಡಿದ್ದು, ಯುವತಿ ದೂರಿನ ಆಧಾರದ ಮೇರೆಗೆ ಮಿಕಾ ಸಿಂಗ್ ರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಮಿಕಾ ಸಿಂಗ್ ರನ್ನು ವಶಕ್ಕೆ ಪಡೆದಿರುವ ಪೊಲೀಸುರ ವಿಚಾರಣೆ ನಡೆಸುತ್ತಿದ್ದಾರೆ.

ಬಾಲಿವುಡ್ ನ ವಿವಾದಿತ ಗಾಯಕ ಮಿಕಾ ಸಿಂಗ್ ಸಾಕಷ್ಟು ಬಾರಿ ಇಂತಹ ವಿವಾದಗಳಿಗೆ ಸಿಲುಕಿದ ಉದಾಹರಣೆಗಳಿದ್ದು, ಈ ಹಿಂದೆ 2016ರಲ್ಲಿ ಮುಂಬೈ ಮೂಲದ ರೂಪದರ್ಶಿಯೊಬ್ಬಳು ಇದೇ ಮಿಕಾ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಇದಕ್ಕೂ ಮೊದಲು ಅಂದರೆ 2006ರಲ್ಲಿ ಇದೇ ಮಿಕಾ ಸಿಂಗ್ ಬಾಲಿವುಡ್ ನಟಿ ರಾಖಿಸಾವಂತ್ ರನ್ನು ಸಾರ್ವಜನಿಕವಾಗಿ ಬಲವಂತದಿಂದ ಚುಂಬಿಸಿ ಸುದ್ದಿಗೆ ಗ್ರಾಸವಾಗಿದ್ದರು.

LEAVE A REPLY

Please enter your comment!
Please enter your name here