ಬಾಗಲಕೋಟೆ

ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಹಸಿರು ಬೆಳೆಸಿ, ಪ್ರಾಣಿ ಸಂಕುಲ ಉಳಿಸಿ ಎಂಬ ಘೋಷಣೆಗಳು ಚಿಣ್ಣರಿಂದ ಕೇಳಿ ಬಂದವು..

ಗ್ರಾಮದ ಶ್ರೀ ಸದ್ಗುರು ಶರಣಬಸವೇಶ್ವರ ಸಿಬಿಎಸ್.ಇ ಶಾಲಾ ಮಕ್ಕಳಿಂದ ಸಂತೆ, ಪ್ರಾಣಿ ಸಂಗ್ರಹಾಲಯ, ರೈತ ವಸ್ತು ಪ್ರದರ್ಶನ, ಅನುಭವ ಮಂಟಪದ ಮಕ್ಕಳ ಪ್ರದರ್ಶನಗಳು ಆಕರ್ಷಣಿಯವಾಗಿದ್ದವು..

ಹಳಿಂಗಳಿ ಕಮರಿಮಠದ ದೀಪೋತ್ಸವ ನಿಮಿತ್ಯ ಹಮ್ಮಿಕೊಂಡ ಮಕ್ಕಳ ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಮಕ್ಕಳ ಪ್ರದರ್ಶನವು ಬಹಳಷ್ಟು ರೋಚಕವಾಗಿತ್ತು..

ಧಾರ್ಮಿಕ ಪ್ರವಚನಗಳು ನಡೆದವು.

ಈ ಸಂದರ್ಭದಲ್ಲಿ ಪೀಠಾಧಿಪತಿ ಶಿವಾನಂದ ಸ್ವಾಮಿಜಿ, ಅಭಿನವ ಶಿವಾನಂದ, ಮಾತೋಶ್ರೀ ದಾಕ್ಷಾಯಣಿದೇವಿ, ಶಾಸಕ ಸಿದ್ದು ಸವದಿ, ದೇವಲ ದೇಸಾಯಿ, ಭುಜಬಲಿ ವೆಂಕಟಾಪೂರ, ಬಾಬಾಗೌಡ ಪಾಟೀಲ, ಮಗೆಪ್ಪ ದೇಸಾಯಿ, ರೈತ ಮುಖಂಡ ಬಸವಂತ ಕಾಂಬಳೆ, ಬಾಬಾಗೌಡ ಪಾಟೀಲ್,ಪ್ರಾಂಶುಪಾಲ ವಾಯ್.ಎಚ್.ಅಲಾಸ ಹಾಗೂ ಹಲವು ಗಣ್ಯರು ಇದ್ದರು..

LEAVE A REPLY

Please enter your comment!
Please enter your name here