1975ರ ಜೂನ್ 25ರ ಸಂಜೆಯಂದು ದೇಶದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಇತಿಶ್ರೀ ಹಾಡಲಾಯಿತು. ತನ್ನ ವಂಶಪಾರಂಪರ್ಯ ಆಡಳಿತದ ರಕ್ಷಣೆಗಾಗಿ ತರಾತುರಿಯಲ್ಲಿ ರೇಡಿಯೋ ಭಾಷಣ ಮಾಡಿದ ಅಂದಿನ ಪ್ರಧಾನಿ, ತುರ್ತು ಪರಿಸ್ಥಿತಿ ಘೋಷಿಸಿದರು. ಏನಾದರು ಅಭಿಪ್ರಾಯ ಹೇಳಿದರೆ ಜೈಲಿಗಟ್ಟುವ ಸ್ಥಿತಿ ನಿರ್ವಿುಸಿದರು. ಸಂವಿಧಾನದ 42ನೇ ತಿದ್ದುಪಡಿ ಮೂಲಕ ಕೋರ್ಟ್, ಸಂಸತ್ತು ಹಾಗೂ ಎಲ್ಲ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲಾಯಿತು. ದೇಶದ ಜನರು ತುರ್ತು ಪರಿಸ್ಥಿತಿ ವಿರುದ್ಧ ದನಿ ಎತ್ತಿದ್ದರೂ, ಸಂವಿಧಾನ ವಿರೋಧಿ ಮನಸ್ಥಿತಿ ಹೊಂದಿದ್ದ ವಂಶಪಾರಂಪರ್ಯ ವ್ಯಕ್ತಿಗಳು ಅದನ್ನು ಹಾಗೆಯೇ ಮುಂದುವರಿಸಿದರು. ಸಂವಿಧಾನದ 356ನೇ ವಿಧಿಯನ್ನು ಕಾಂಗ್ರೆಸ್ 100ಕ್ಕೂ ಅಧಿಕ ಬಾರಿ ಬಳಸಿದ್ದು, ಇಂದಿರಾ ಗಾಂಧಿಯೊಬ್ಬರೇ 50ಕ್ಕೂ ಅಧಿಕ ಬಾರಿ ಉಪಯೋಗಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ನಾಯಕ ಅಥವಾ ಸರ್ಕಾರ ಇಷ್ಟವಾಗದಿದ್ದರೆ ವಜಾ ಮಾಡುವುದೇ ಕಾರ್ಯವೈಖರಿ ಯಾಗಿತ್ತು.ಇನ್ನು ನ್ಯಾಯಾಂಗ ನಿಂದನೆ ಎನ್ನುವುದು ಕಾಂಗ್ರೆಸ್ ಪಾಲಿಗೆ ದಂತಕಥೆಯಿದ್ದಂತೆ. ಸಂವಿಧಾನದ ಬದಲಿಗೆ ಒಂದು ಕುಟುಂಬಕ್ಕೆ ಋಣಿಯಾಗಿ ಕೋರ್ಟ್ ವ್ಯವಸ್ಥೆ ಇರಬೇಕು ಎಂಬ ನಿಟ್ಟಿನಲ್ಲಿ ಇಂದಿರಾ ಗಾಂಧಿ ವ್ಯವಸ್ಥೆ ರೂಪಿಸಿದ್ದರು. ಕುಟುಂಬಕ್ಕೆ ಆಪ್ತವಾಗಿದ್ದ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್​ನ

ಮುಖ್ಯ ನ್ಯಾಯಮೂರ್ತಿ ಮಾಡುವ ಸಲುವಾಗಿ ಕೆಲ ಪ್ರಾಮಾಣಿಕ ಹಾಗೂ ಅರ್ಹ ಹಿರಿಯ ನ್ಯಾಯಮೂರ್ತಿಗಳನ್ನು ಕಡೆಗಣಿಸಲಾಗಿತ್ತು. ಕಾಂಗ್ರೆಸ್​ನ ಕಾರ್ಯವೈಖರಿ ನಿಯಮ ಎಲ್ಲರಿಗೂ ಅರ್ಥವಾಗುವಂತಿದೆ. ‘ಯಾವುದೇ ನ್ಯಾಯಾಂಗದ ತೀರ್ಪಗಳು ಅವರ ವಿರುದ್ಧ ಬಂದರೆ ತಿರಸ್ಕರಿಸಿ, ಆದೇಶ ನೀಡಿದ ನ್ಯಾಯಾಧೀಶರ ವಿರುದ್ಧ ಅಪಪ್ರಚಾರ ಮಾಡಿ, ಇಲ್ಲವೇ ಮಹಾಭಿ ಯೋಗದ ಬೆದರಿಕೆ ಹಾಕಿ’ ಎನ್ನುವುದು ಕಾಂಗ್ರೆಸ್ ಕಾರ್ಯವೈಖರಿ.

ತನ್ನ ವಂಶಪಾರಂಪರ್ಯ ಆಡಳಿತದ ರಕ್ಷಣೆಗಾಗಿ ತರಾತುರಿಯಲ್ಲಿ ರೇಡಿಯೋ ಭಾಷಣ ಮಾಡಿದ ಅಂದಿನ ಪ್ರಧಾನಿ, ತುರ್ತು ಪರಿಸ್ಥಿತಿ ಘೋಷಿಸಿದರು. ಏನಾದರು ಅಭಿಪ್ರಾಯ ಹೇಳಿದರೆ ಜೈಲಿಗಟ್ಟುವ ಸ್ಥಿತಿ ನಿರ್ವಿುಸಿದರು. ಸಂವಿಧಾನದ 42ನೇ ತಿದ್ದುಪಡಿ ಮೂಲಕ ಕೋರ್ಟ್, ಸಂಸತ್ತು ಹಾಗೂ ಎಲ್ಲ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲಾಯಿತು. ದೇಶದ ಜನರು ತುರ್ತು ಪರಿಸ್ಥಿತಿ ವಿರುದ್ಧ ದನಿ ಎತ್ತಿದ್ದರೂ, ಸಂವಿಧಾನ ವಿರೋಧಿ ಮನಸ್ಥಿತಿ ಹೊಂದಿದ್ದ ವಂಶಪಾರಂಪರ್ಯ ವ್ಯಕ್ತಿಗಳು ಅದನ್ನು ಹಾಗೆಯೇ ಮುಂದುವರಿಸಿದರು. ಸಂವಿಧಾನದ 356ನೇ ವಿಧಿಯನ್ನು ಕಾಂಗ್ರೆಸ್ 100ಕ್ಕೂ ಅಧಿಕ ಬಾರಿ ಬಳಸಿದ್ದು, ಇಂದಿರಾ ಗಾಂಧಿಯೊಬ್ಬರೇ 50ಕ್ಕೂ ಅಧಿಕ ಬಾರಿ ಉಪಯೋಗಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ನಾಯಕ ಅಥವಾ ಸರ್ಕಾರ ಇಷ್ಟವಾಗದಿದ್ದರೆ ವಜಾ ಮಾಡುವುದೇ ಕಾರ್ಯವೈಖರಿ ಯಾಗಿತ್ತು.ಇನ್ನು ನ್ಯಾಯಾಂಗ ನಿಂದನೆ ಎನ್ನುವುದು ಕಾಂಗ್ರೆಸ್ ಪಾಲಿಗೆ ದಂತಕಥೆಯಿದ್ದಂತೆ. ಸಂವಿಧಾನದ ಬದಲಿಗೆ ಒಂದು ಕುಟುಂಬಕ್ಕೆ ಋಣಿಯಾಗಿ ಕೋರ್ಟ್ ವ್ಯವಸ್ಥೆ ಇರಬೇಕು ಎಂಬ ನಿಟ್ಟಿನಲ್ಲಿ ಇಂದಿರಾ ಗಾಂಧಿ ವ್ಯವಸ್ಥೆ ರೂಪಿಸಿದ್ದರು. ಕುಟುಂಬಕ್ಕೆ ಆಪ್ತವಾಗಿದ್ದ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್​.

LEAVE A REPLY

Please enter your comment!
Please enter your name here