ವಿಜಯವಾಡ: 86 ವರ್ಷದ ಹಾಸಿಗೆ ಹಿಡಿದ ವೃದ್ಧ ಮಹಿಳೆಯ ಮೇಲೆ ಆತನ ಮಗನೇ ಕುಡಿದು ಲೈಂಗಿಕ ದೌರ್ಜನ್ಯ ನಡೆಸಿದ ಮೃಗೀಯ ಘಟನೆಯೊಂದು ಕೃಷ್ಣಾ ಜಿಲ್ಲೆಯ ವುಯ್ಯೂರು ಮಂಡಲದ ಅಕುನೂರು ಎಂಬ ಊರಿನಲ್ಲಿ ನಡೆದಿದೆ.

ಮೂರು ದಿನಗಳ ಹಿಂದೆ ನಡೆದ ಘಟನೆಯು ಸೋಮವಾರ ಬೆಳಕಿಗೆ ಬಂದಿದೆ. ಈ ಮಹಿಳೆ ತನ್ನ ನೆರೆಕರೆಯವರಲ್ಲಿ ಮಾತನಾಡುವಾಗ ಈ ವಿಷಯ ಹೇಳಿದ್ದು, ಇದು ಸಾಮಾಜಿಕ ಕಾರ್ಯಕರ್ತರಿಗೆ ತಲುಪಿದ ಬಳಿಕ, ಕಾಮುಕ ಮಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಈ ವೃದ್ಧ ಮಹಿಳೆಯ ಮನವೊಲಿಸಿದ್ದರು. ಇಂಥ ಕ್ರೂರ ಸಂಗತಿಯನ್ನು ಸುಮ್ಮನೆ ಬಿಡಬಾರದು, ಸಮಾಜದಲ್ಲಿ ಇಂಥವರಿಗೆ ತಕ್ಕ ಪಾಠವಾಗಬೇಕೆಂಬ ಉದ್ದೇಶದಿಂದ ಮಹಿಳೆಯೂ ಈ ಕುರಿತು ದೂರು ನೀಡಲು ಒಪ್ಪಿದ್ದಾರೆ.

48ರ ಹರೆಯದ ಲಾರಿ ಚಾಲಕನಾಗಿರುವ ಆರೋಪಿ ಮಗನಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಆತನೀಗ ತಲೆ ಮರೆಸಿಕೊಂಡಿದ್ದಾನೆ.

ಹಿಂದೊಮ್ಮೆ ಕುಡಿದು ಈ ಮನೆಗೆ ಬಂದಿದ್ದ ಮಗ, ತಾಯಿಯೊಂದಿಗೆ ಜಗಳವಾಡಿ ಹೋಗಿದ್ದ. ಈ ಬಾರಿ ಒಡಿಶಾ ರಾಜ್ಯದತ್ತ ಲಾರಿ ಚಲಾಯಿಸಿ ಮರಳಿದ್ದ ಈತ, ಕಂಠಪೂರ್ತಿ ಮದ್ಯ ಸೇವಿಸಿದ್ದ. ಅನಾರೋಗ್ಯಪೀಡಿತ ರಾತ್ರಿ ನಿದ್ದೆಯಲ್ಲಿದ್ದಾಗ ಆಕೆಯನ್ನು ಎಬ್ಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ತಾಯಿ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದು, ಹಾಸಿಗೆಯಲ್ಲೇ ಇದ್ದಾರೆ. ಈ ಅಮಾನುಷ ಘಟನೆ ನಡೆದ ದಿನ ಆಕೆಯ ಇತರ ಇಬ್ಬರು ಮಕ್ಕಳು ಮನೆಯಲ್ಲಿರಲಿಲ್ಲ. ಆರೋಪಿಯು ಅವರ ಪುತ್ರರಲ್ಲಿ ಅತ್ಯಂತ ಕಿರಿಯವ.

‘ನಾವು ದೌರ್ಜನ್ಯಪೀಡಿತೆಯ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇದು ಲೈಂಗಿಕ ದೌರ್ಜನ್ಯ ಎಂಬುದನ್ನು ವೈದ್ಯಕೀಯ ವರದಿಯೂ ದೃಢಪಡಿಸಿದೆ’ ಎದು ವುಯ್ಯೂರು ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಕಾಶಿ ವಿಶ್ವನಾಥ್ ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ವುಯ್ಯೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ಮೇಲೆ ಇತ್ತೀಚೆಗೆ ನಡೆದ ಎರಡನೇ ಲೈಂಗಿಕ ದೌರ್ಜನ್ಯ ಪ್ರಕರಣವಿದು. 2018ರ ಆಗಸ್ಟ್ 27ರಂದು, ವಯ್ಯೂರು ಮಂಡಲದ ಕಳವಪಾಮುಲ ಗ್ರಾಮದಲ್ಲಿ 20 ಯುವಕನೊಬ್ಬ 68ರ ಹರೆಯದ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣ ದಾಖಲಾಗಿತ್ತು.

Summary
ವಿಜಯವಾಡ : ಹಾಸಿಗೆ ಹಿಡಿದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ಪುತ್ರ !
Article Name
ವಿಜಯವಾಡ : ಹಾಸಿಗೆ ಹಿಡಿದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ಪುತ್ರ !
Description
'ನಾವು ದೌರ್ಜನ್ಯಪೀಡಿತೆಯ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇದು ಲೈಂಗಿಕ ದೌರ್ಜನ್ಯ ಎಂಬುದನ್ನು ವೈದ್ಯಕೀಯ ವರದಿಯೂ ದೃಢಪಡಿಸಿದೆ' ಎದು ವುಯ್ಯೂರು ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಕಾಶಿ ವಿಶ್ವನಾಥ್ ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here