ಹುಬ್ಬಳ್ಳಿ : ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷ ಣನೀಡಬೇಕೆಂದು ಕೆ.ಎಲ್‌.ಇ. ಸಂಸ್ಥೆಯನಿರ್ದೇಶಕ ಶಂಕರಣ್ಣ ಐ. ಮುನವಳ್ಳಿ ಹೇಳಿದರು. 

ಇಲ್ಲಿನ ಪಿ. ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಕೆ.ಎಲ್‌.ಇ. ಸಂಸ್ಥೆಯಿಂದ 2018-19ನೇ ಸಾಲಿಗೆ ಪಿ.ಯು.ಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರ ಪಾಸಿಂಗ್‌ ಕ್ಯಾಪ್ಸುಲ್‌ ಗ್ರಂಥವನ್ನು ಬಿಡುಗಡೆಮಾಡಿ ಮಾತನಾಡಿದರು. 

ಸಿದ್ದಪಡಿಸಿದ್ದ ಗ್ರಂಥಗಳಲ್ಲಿ ಲೋಪದೋಷಗಳು ಬರದಂತೆ ಕಾರ್ಯಮಾಡಬೇಕೆಂದರಲ್ಲದೇ, ಸ್ಪರ್ಧಾತ್ಮಕ ಈ ದಿನಮಾನಗಳಲ್ಲಿ ಶಿಕ್ಷ ಕರ ಜವಾಬ್ದಾರಿ ಹೆಚ್ಚಿದೆ ಎಂದರು. ಪಿಯುಸಿ ಶಿಕ್ಷ ಣ ವಿದ್ಯಾರ್ಥಿಗಳ ಭವಿಷ್ಯ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರಲ್ಲದೇ, ಕನ್ನಡ, ಇಂಗ್ಲಿಷ ಮತ್ತು ಹಿಂದಿ ಭಾಷೆಗಳಲ್ಲಿಯೂ ಪಾಸಿಂಗ್‌ ಕ್ಯಾಪ್ಸುಲ್‌ ಗ್ರಂಥಗಳನ್ನು ಸಿದ್ಧಪಡಿಸಬೇಕೆಂದರು. ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದು, ಅವರಲ್ಲಿ ಸ್ಫೂರ್ತಿ ತುಂಬಬೇಕೆಂದರು. 

ಪ್ರಾಚಾರ್ಯ ಡಾ. ಎಂ.ಎಸ್‌. ಪಾಟೀಲ ಮಾತನಾಡಿ, ತಂತ್ರಜ್ಞಾನದ ಈ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲಗಳಿಂದ ಜ್ಞಾನ ಲಭಿಸುತ್ತಿದ್ದು, ಅವರಿಗೆ ಅತ್ಯುತ್ತಮ ಬೋಧನೆ ಮಾಡಲು ಶಿಕ್ಷ ಕರಿಗೆ ಸವಾಲಾಗಿದ್ದು, ಈ ಸವಾಲು ಸ್ವೀಕರಿಸಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದರು. ಉಪನ್ಯಾಸಕರು ತಮ್ಮ ಜವಾಬ್ದಾರಿಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಪಡೆಯಲು ಮಾರ್ಗದರ್ಶನ ಮಾಡಬೇಕೆಂದರು.

ದವಿ ವಿಭಾಗದ ಪ್ರಾಚಾರ್ಯ ಡಾ. ಎಸ್‌.ವಿ. ಹಿರೇಮಠ, ರಸಾಯನಶಾಸ್ತ್ರ ಸಂಯೋಜಕ ಡಾ. ಹನುಮನಗೌಡ ಎಚ್‌. ಮಾತನಾಡಿದರು. ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಪ್ರೊ. ಎಸ್‌. ಬಿ. ಹಿರೇಮಠ ಸ್ವಾಗತಿಸಿದರು. ವೇಣುಗೋಪಾಲ ಎಚ.ಆರ್‌. ವಂದಿಸಿದರು. ಪ್ರಾಚಾರ್ಯ ಎಮ್‌.ಎಸ್‌. ನರಗುಂದ ಮತ್ತು ಜ್ಯೋತಿಬಾ ಶಿಂಧೆ ಗ್ರಂಥಗಳ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪನ್ಯಾಸಕಿ ಸವಿತಾ ಎಸ್‌. ಎಚ್‌. ನಿರೂಪಿಸಿದರು. ಆರ್‌. ಈ. ಕುರವತ್ತಿ, ನೀಲಕಂಠ, ಕೆ.ಎಲ್‌.ಇ ಸಂಸ್ಥೆಯ 32 ಕಾಲೇಜುಗಳ ಪ್ರಾಚಾರ್ಯರು ಮತ್ತು ಸಿಬ್ಬಂದಿ ಇದ್ದರು. 

LEAVE A REPLY

Please enter your comment!
Please enter your name here